ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಬಂಧ; ಯುಎಸ್ ಕಾಂಗ್ರೆಸ್ ಪಾತ್ರ ಮುಖ್ಯ-ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧ; ಯುಎಸ್ ಕಾಂಗ್ರೆಸ್ ಪಾತ್ರ ಮುಖ್ಯ-ಸಿಂಗ್
ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಭಾರತ ಮತ್ತು ಅಮೆರಿಕ ನಡುವೆ ಅಣು ಒಪ್ಪಂದ ಕೂಡಲೇ ಜಾರಿಗೆ ಬರುವ ನಿಟ್ಟಿನಲ್ಲಿ ಯುಎಸ್ ಕಾಂಗ್ರೆಸ್‌ನ ಪಾತ್ರ ಮಹತ್ವವಾದುದು ಎಂದು ಒತ್ತಿ ಹೇಳಿದ್ದಾರೆ.

ವಿಶ್ವ ಸಂಸ್ಥೆಯ ಅಧಿವೇಶನವೂ ಸೇರಿದಂತೆ ಹತ್ತು ದಿನಗಳ ಅಮೆರಿಕ ಪ್ರವಾಸಕ್ಕೆಂದು ನವದೆಹಲಿಯಿಂದ ಹೊರಟ ಸಂದರ್ಭದಲ್ಲಿ ಬೋರ್ಡ್ ಏರ್‌ಫೋರ್ಸ್ ಒನ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಾ. ಸಿಂಗ್, ಯುಎಸ್ ಕಾಂಗ್ರೆಸ್‌ನ ಅಧಿಕೃತ ಒಪ್ಪಿಗೆ ಮುದ್ರೆ ಬೀಳದೆ ಎಲ್ಲವೂ ಅಸ್ಪಷ್ಟ ಎಂದು ತಿಳಿಸಿದರು.

''ನಮಗೆ ಇನ್ನೂ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಯುಎಸ್ ಕಾಂಗ್ರೆಸ್ ಈಗಾಗಲೇ ದೇಶದಲ್ಲುಂಟಾದ ಆರ್ಥಿಕ ಹಣದುಬ್ಬರದ ಕುರಿತಾಗಿ ಸಂಕಷ್ಟದಲ್ಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಕುರಿತು ಕಾದು ನೋಡೋಣ.'' ಎಂದರು.

ಒಂದು ವೇಳೆ ಒಪ್ಪಂದದಲ್ಲಿ ಯಶಸ್ವಿಯಾಗದಿದ್ದರೆ ತಮಗೆ ನಿರಾಸೆಯಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಾಜಕೀಯದಲ್ಲಿ ನಿರಾಸೆಗಳನ್ನೆದುರಿಸಲು ನಾನು ಕಲಿತಿದ್ದೇನೆ ಎಂದು ಹೇಳಿದರು.

''ನಾವಿನ್ನೂ ಆ ರೀತಿ ಯೋಚನೆ ಮಾಡುವ ಸಮಯ ಬಂದಿಲ್ಲ. ಏನೇ ಆದರೂ ಒಪ್ಪಂದ ಪೂರ್ತಿಯಾಗುವುದೆಂಬ ಆಶಾಭಾವ ನನ್ನದು'' ಎಂದು ಭರವಸೆ ವ್ಯಕ್ತಪಡಿಸಿದರು.
ಮತ್ತಷ್ಟು
ಹುಡುಗಿಯರಿಗೆ 9ರಲ್ಲೇ ವಿವಾಹ: ಫತ್ವಾ!
ಫಿನ್‌‌ಲ್ಯಾಂಡ್ ಶಾಲೆಯಲ್ಲಿ ಶೂಟೌಟ್ ‌‌- 9 ಬಲಿ
ಪಾಕ್ ಬಾಂಬ್ ದಾಳಿ: ಜವಾಹರಿ ಬಂಟನ ಬಂಧನ
ಜಿಹಾದ್ ಪ್ರಚಾರಕ್ಕೆ ಮಸೀದಿಗಳ ಬಳಕೆ: ವರದಿ
ಅಣು ಒಪ್ಪಂದದಿಂದ ಅಮೆರಿಕದಲ್ಲಿ 250,000 ಉದ್ಯೋಗ
ಕೋಮುಗಲಭೆ: ಸಿಂಗ್ ವಿವರಣೆ ಕೇಳಲು ಬುಷ್‌ಗೆ ಒತ್ತಾಯ