ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಉಗ್ರರ ನಿಗ್ರಹದಲ್ಲಿ ಸಕ್ರಿಯ ಪಾತ್ರಕ್ಕೆ ಬುಷ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ನಿಗ್ರಹದಲ್ಲಿ ಸಕ್ರಿಯ ಪಾತ್ರಕ್ಕೆ ಬುಷ್ ಆಗ್ರಹ
PTI
ಭಯೋತ್ಪಾದನೆಯು ವಿಶ್ವಕ್ಕೆ ಸವಾಲನ್ನೊಡ್ಡುತ್ತಿದೆ ಎಂದು ಪುನರುಚ್ಛರಿಸುವ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ , ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ವಿಶ್ವಸಂಸ್ಥೆಗೆ ಒತ್ತಾಯಿಸಿದ್ದಾರೆ.

ಮಂಗಳವಾರ ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆಯ ಹೋರಾಟದಲ್ಲಿನ ವಿಶ್ವಸಂಸ್ಥೆ, ಜಿ8 ಶಕ್ತಿಗಳು ಮತ್ತು ಇತರ ಜಾಗತಿಕ ಸಮೂಹಗಳ ಪ್ರಯತ್ನವನ್ನು ಶ್ಲಾಘಿಸಿದ್ದು, ಭಯೋತ್ಪಾದನೆಯ ಸಂಪೂರ್ಣ ನಿಗ್ರಹಕ್ಕೆ ಇನ್ನಷ್ಟು ಕ್ರಮ ಕೈಗೊಳ್ಳುವಂತೆ ಕರೆ ನೀಡಿದರು.

ಭಯೋತ್ಪಾದನೆಯೆಂಬ ಭೀತಿಯಿಂದ ಜನರು ಸುರಕ್ಷಿತವಾಗುವವರೆಗೆ ಉಗ್ರರ ವಿರುದ್ಧ ಯಾವುದೇ ಕರುಣೆ ತೋರಬಾರದು ಎಂದು ಬುಷ್ ಸ್ಪಷ್ಟಪಡಿಸಿದರು.

ಈ ನಡುವೆ, ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯಲ್ಲಿ ವಿವಿಧ ವಿವಾದಗಳ ಪರಿಹಾರದತ್ತ ದೃಷ್ಟಿ ಹಾಯಿಸಿರುವ ವಿಶ್ವಸಂಸ್ಥೆ ಪ್ರಧಾನ ಅಧ್ಯಕ್ಷ ಬಾನ್ ಕಿ ಮೂನ್, ವಿಶ್ವದ ಗಂಭೀರ ಸಮಸ್ಯೆಗಳಾದ ಹವಾಮಾನ ವೈಪರೀತ್ಯ, ಇಂಧನ ಬಿಕ್ಕಟ್ಟು, ಬಡತನ ಮುಂತಾದವುಗಳ ಪರಿಹಾರಕ್ಕೆ ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಜಾಗತಿಕ ನಾಯಕರಿಗೆ ಕರೆ ನೀಡಿದರು.

ಎಲ್ಲಾ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವೃದ್ಧಿಗೊಳಿಸುವಂತೆ ಕರೆ ನೀಡಿದ ಅವರು, ಇತರ ದೇಶಗಳೊಂದಿಗಿನ ಉತ್ತಮ ಸಂಬಂಧದ ಹೊರತಾಗಿ, ಯಾವುದೇ ರಾಷ್ಟ್ರವು ಮಾನವಸಂಪನ್ಮೂಲ ಅಭಿವೃದ್ಧಿ ಅಥವಾ ದೇಶದ ಹಿತಾಸಕ್ತಿ ರಕ್ಷಣೆಯನ್ನು ನಡೆಸಲು ಅಸಾಧ್ಯ ಎಂಬುದಾಗಿ ಒತ್ತಿ ಹೇಳಿದರು.
ಮತ್ತಷ್ಟು
ಅಣುಬಂಧ: ಯಎಸ್ ಸೆನೆಟ್ ಸಮಿತಿ ಗ್ರೀನ್ ಸಿಗ್ನಲ್
ಅಣುಬಂಧ; ಯುಎಸ್ ಕಾಂಗ್ರೆಸ್ ಪಾತ್ರ ಮುಖ್ಯ-ಸಿಂಗ್
ಹುಡುಗಿಯರಿಗೆ 9ರಲ್ಲೇ ವಿವಾಹ: ಫತ್ವಾ!
ಫಿನ್‌‌ಲ್ಯಾಂಡ್ ಶಾಲೆಯಲ್ಲಿ ಶೂಟೌಟ್ ‌‌- 9 ಬಲಿ
ಪಾಕ್ ಬಾಂಬ್ ದಾಳಿ: ಜವಾಹರಿ ಬಂಟನ ಬಂಧನ
ಜಿಹಾದ್ ಪ್ರಚಾರಕ್ಕೆ ಮಸೀದಿಗಳ ಬಳಕೆ: ವರದಿ