ಇಸ್ಲಾಮಾಬಾದಿನ ಮರಿಯಟ್ ಹೋಟೆಲ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯ ನಂತರ, ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ದೇಶದಲ್ಲಿನ ಪರಿಸ್ಥಿತಿಯ ಮೇಲೆ ನಿಯಂತ್ರಣವನ್ನು ಹೊಂದಿಲ್ಲ ಎಂಬ ಭಾರತದ ಹೇಳಿಕೆಯು ಅಸಂಬದ್ಧ ಎಂದು ಪಾಕಿಸ್ತಾನ ಹೇಳಿದೆ.
ದೇಶದಲ್ಲಿನ ಇತ್ತೀಚಿಗಿನ ಭಯೋತ್ಪಾದನಾ ದಾಳಿಗಳ ಹೊರತಾಗಿಯೂ, ಜರ್ದಾರಿ ಅವರು ಸದೃಢ ನಾಯಕರಾಗಿದ್ದು, ಪಾಕಿಸ್ತಾನದಲ್ಲಿನ ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ತಿಳಿಸಿದ್ದಾರೆ.
ಜರ್ದಾರಿ ತನ್ನ ಕರ್ತವ್ಯವನ್ನು ಸರಿಯಾಗಿಯೇ ಮಾಡುತ್ತಿದ್ದು, ಅವರ ಸಾಮರ್ಥ್ಯದ ಬಗ್ಗೆ ಯಾವುದೇ ಎರಡು ಮಾತಿಲ್ಲ ಎಂಬುದಾಗಿ ಬಶೀರ್ ಸ್ಪಷ್ಟಪಡಿಸಿದ್ದಾರೆ.
ಜರ್ದಾರಿ ಪಾಕಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದದೇ ಇದ್ದು, ಇದು ಭಾರತದ ಹಿತಾಸಕ್ತಿಯ ಮೇಲೆ ಹಾನಿ ಉಂಟುಮಾಡಬಹುದು ಎಂಬುದಾಗಿ ಭಾರತೀಯ ಸರಕಾರವು ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಪಾಕಿಸ್ತಾನವು ಈ ಹೇಳಿಕೆಯನ್ನು ನೀಡಿದೆ.
|