ಆಫ್ರಿಕಾದ ಶಾಂತಿ ಸಂಧಾನಕಾರರು ಮತ್ತು ಇಸ್ಲಾಂ ಬಂಡುಕೋರರ ನಡುವೆ ಬುಧವಾರ ನಡೆದ ಘರ್ಷಣೆಯಲ್ಲಿ 13ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ಲಾಂನ ಬಂಡುಕೋರರು ಮಂಗಳವಾರದಂದು ದಕ್ಷಿಣ ಮೊಗಾದಿಶು ಪ್ರದೇಶಲ್ಲಿರುವ ಶಾಂತಿ ಸಂಧಾನಕಾರರ ಬೇಸ್ ಮೇಲೆ ಭಾರೀ ಪ್ರಮಾಣದ ಶಸ್ತ್ರದೊಂದಿಗೆ ದಾಳಿ ನಡೆಸಿದ ಪರಿಣಾಮ ಏಳು ಮಂದಿ ನಾಗರಿಕರು ಬಲಿಯಾಗಿದ್ದು, ಬುಧವಾರ ಮತ್ತೆ ಘರ್ಷಣೆ ಮುಂದುವರಿದ ಪರಿಣಾಮ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 13ಕ್ಕೇರಿದೆ.
ಏಳು ನಾಗರಿಕರಲ್ಲಿ ಓರ್ವ ಬಾಲಕಿಯೂ ಸೇರಿದ್ದಾಳೆ ಎಂದು ಅಬ್ದಿಜೀಜ್ ಮೊಹಮ್ಮದ್ ದಿರೈ ಪ್ರದೇಶದ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಈ ಘರ್ಷಣೆಯಲ್ಲಿ ಕನಿಷ್ಠ 30ಮಂದಿ ಗಾಯಗೊಂಡಿರುವುದಾಗಿ ರಾಜಧಾನಿಯ ಮಾದಿನಾ ಆಸ್ಪತ್ರೆಯ ಮೂಲಗಳು ಹೇಳಿವೆ.ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಶಾಂತಿ ಸಂಧಾನಕಾರರು ಅಲ್ಲಾನ ಶತ್ರುಗಳು ಎಂದು ಸೋಮಾಲಿಯಾ ಭಯೋತ್ಪಾದಕರು ಈ ಬರ್ಭರ ಕೃತ್ಯವನ್ನು ಎಸಗಿರುವುದಾಗಿ ವಕ್ತಾರ ಮೊಹಮ್ಮದ್ ಹೇಳಿದ್ದಾರೆ.
|