ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ
PTI
ಪಾಕಿಸ್ತಾನ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನ ಪ್ರಾಧಿಕಾರವು ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಿಧಿಸಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 60 ಜನರ ಸಾವಿಗೆ ಕಾರಣವಾದ ಸೆಪ್ಟೆಂಬರ್ 20ರಂದು ಪಾಕಿಸ್ತಾನ ರಾಜಧಾನಿಯ ಮ್ಯಾರಿಯಟ್ ಹೋಟೆಲ್‌ನಲ್ಲಿನ ಬಾಂಬ್ ದಾಳಿ ನಡೆದ ಕೆಲವೇ ದಿನಗಳ ನಂತರ ಈ ಬೆದರಿಕೆ ಬಂದಿದೆ.

ಗುರುವಾರ ಮಧ್ಯಾಹ್ನದೊಳಗೆ ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿ ನಡೆಯಲಿದೆ ಎಂಬುದಾಗಿ ಇಂದು ಮುಂಜಾನೆ ಬೆದರಿಕೆ ಕರೆ ಬಂದಿದ್ದು, ಈ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೋ ಹತ್ಯೆಗೊಳಗಾದ ನಂತರ ಬೇನಜೀರ್ ಭುಟ್ಟೋ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಎಂಬುದಾಗಿ ಮರು ನಾಮಾಂಕಿತಗೊಂಡ ವಿಮಾನ ನಿಲ್ದಾಣದಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಥಳದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಅಮೆರಿಕ ಆರ್ಥಿಕತೆಯು ಅಪಾಯದಲ್ಲಿದೆ:ಬುಷ್
ಭಯೋತ್ಪಾದನೆ ದಮನಕ್ಕೆ ಸಿಂಗ್-ಜರ್ದಾರಿ ಪ್ರತಿಜ್ಞೆ
ಮೊಗಾದಿಶು ಘರ್ಷಣೆಗೆ 13 ಬಲಿ
ಭಯೋತ್ಪಾದನೆ:ಭಾರತದ ಹೇಳಿಕೆಗೆ ಜರ್ದಾರಿ ಮುನಿಸು
ಉಗ್ರರ ನಿಗ್ರಹದಲ್ಲಿ ಸಕ್ರಿಯ ಪಾತ್ರಕ್ಕೆ ಬುಷ್ ಆಗ್ರಹ
ಅಣುಬಂಧ: ಯಎಸ್ ಸೆನೆಟ್ ಸಮಿತಿ ಗ್ರೀನ್ ಸಿಗ್ನಲ್