ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣು ಪರೀಕ್ಷೆ ನಡೆಸುವ ಹಕ್ಕು ನಮಗಿದೆ:ಭಾರತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಪರೀಕ್ಷೆ ನಡೆಸುವ ಹಕ್ಕು ನಮಗಿದೆ:ಭಾರತ
PTI
ಭಾರತವು ಪರಮಾಣು ಪರೀಕ್ಷೆ ನಡೆಸಿದಲ್ಲಿ, ಪರಮಾಣು ಪೂರೈಕಾ ಸಮೂಹ ರಾಷ್ಟ್ರಗಳು ಭಾರತಕ್ಕೆ ಇಂಧನ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಬೇಕೆನ್ನುವ ಸೆನೆಟ್ ಸಮಿತಿಯ ಹೇಳಿಕೆಗೆ, ಇತರರಿಗೆ ಪ್ರತಿಕ್ರಿಯಿಸುವ ಹಕ್ಕು ಇರುವಂತೆ ಭಾರತಕ್ಕೆ ಪರಮಾಣು ಪರೀಕ್ಷೆ ನಡೆಸುವ ಹಕ್ಕು ಇದೆ ಎಂಬುದನ್ನು ಪುನರುಚ್ಚರಿಸಿದೆ.

'ಅಮೆರಿಕ ಆಂತರಿಕ ಪ್ರಕ್ರಿಯೆಯ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಮಗೆ ಅಣು ಪರೀಕ್ಷೆ ನಡೆಸುವ ಹಕ್ಕಿದೆ. ಅದೇ ರೀತಿ ಅವರಿಗೆ ಪ್ರತಿಕ್ರಿಯಿಸುವ ಹಕ್ಕಿದೆ' ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತವು ಒಂದು ವೇಳೆ ಅಣು ಪರೀಕ್ಷೆಯನ್ನು ನಡೆಸಿದಲ್ಲಿ ಎನ್‌ಎಸ್‌ಜಿಯಿಂದ ಇಂಧನ ಪೂರೈಕೆ ಮತ್ತು ಪರಮಾಣು ತಂತ್ರಜ್ಞಾನ ರವಾನೆಯನ್ನು ಅಮೆರಿಕವು ಸ್ಥಗಿತಗೊಳಿಸುವ ಬಗ್ಗೆ ಸೆನೆಟ್ ವಿದೇಶಾಂಗ ಸಂಬಂಧ ಸಮಿತಿಯ ಕರಡಿನ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

19-2 ಮತಗಳ ಅಂತರದಲ್ಲಿ ಸೆನೆಟ್ ಸಮಿತಿಯು ಮಂಗಳವಾರ ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ಗ್ರೀನ್‌ಸಿಗ್ನಲ್ ನೀಡಿದ್ದು, ಇದೇ ಸಮಯದಲ್ಲಿ, 123 ಭಾರತ ಅಮೆರಿಕ ದ್ವಿಪಕ್ಷೀಯ ಪರಮಾಣು ಒಪ್ಪಂದದಡಿಯಲ್ಲಿ ಭಾರತಕ್ಕೆ ನಿರಂತರ ಪರಮಾಣು ಪೂರೈಕೆಯ ಮೇಲೆ ಪ್ರಭಾವ ಬೀರುವಂತಹ ಅಂಶವನ್ನೂ ಗಮನಕ್ಕೆ ತಂದಿದೆ.
ಮತ್ತಷ್ಟು
ಪಾಕ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ
ಅಮೆರಿಕ ಆರ್ಥಿಕತೆಯು ಅಪಾಯದಲ್ಲಿದೆ:ಬುಷ್
ಭಯೋತ್ಪಾದನೆ ದಮನಕ್ಕೆ ಸಿಂಗ್-ಜರ್ದಾರಿ ಪ್ರತಿಜ್ಞೆ
ಮೊಗಾದಿಶು ಘರ್ಷಣೆಗೆ 13 ಬಲಿ
ಭಯೋತ್ಪಾದನೆ:ಭಾರತದ ಹೇಳಿಕೆಗೆ ಜರ್ದಾರಿ ಮುನಿಸು
ಉಗ್ರರ ನಿಗ್ರಹದಲ್ಲಿ ಸಕ್ರಿಯ ಪಾತ್ರಕ್ಕೆ ಬುಷ್ ಆಗ್ರಹ