ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶೀಘ್ರವೇ 'ಅಣುಮೋದನೆ' ಪ್ರಧಾನಿಗೆ ಬುಷ್ ಭರವಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ 'ಅಣುಮೋದನೆ' ಪ್ರಧಾನಿಗೆ ಬುಷ್ ಭರವಸೆ
PTI
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಾಷಿಂಗ್ಟನ್‌ನಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರನ್ನು ಭೇಟಿಯಾಗಿದ್ದು, ಆದರೆ, ಅಣು ಒಪ್ಪಂದಕ್ಕೆ ಇನ್ನೂ ಯುಎಸ್ ಕಾಂಗ್ರೆಸ್ ಅನುಮೋದನೆ ಸಿಗದ ಹಿನ್ನೆಲೆಯಲ್ಲಿ ಒಪ್ಪಂದ ಸಹಿ ಹಾಕುವ ಸಿಂಗ್ ಕನಸು ಕನಸಾಗಿಯೇ ಉಳಿದಿದೆ.

ಏನೇ ಆದರೂ, ಭಾರತ ಅಮೆರಿಕ ಪರಮಾಣು ಒಪ್ಪಂದ ಎರಡೂ ದೇಶಗಳನ್ನು ಗಮನದಲ್ಲಿರಿಸಿ ತೃಪ್ತಿಕರ ರೀತಿಯಲ್ಲಿ ಅನುಮೋದನೆ ಪಡೆದುಕೊಳ್ಳಲಿದೆ ಎಂಬುದಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇದೇ ವೇಳೆ ಆಶಾವಾದ ವ್ಯಕ್ತಪಡಿಸಿದರು.

ಆದಷ್ಟು ಶೀಘ್ರದಲ್ಲಿ ಒಪ್ಪಂದಕ್ಕೆ ಅನುಮೋದನೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಬುಷ್ ಆಡಳಿತವು ಕಠಿಣ ಶ್ರಮ ಪಡುತ್ತಿರುವುದಾಗಿ ಬುಷ್ ಸಿಂಗ್‌ಗೆ ಭರವಸೆ ನೀಡಿದರು.

ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹಾವರ್ಡ್ ಬರ್ಮನ್ ಅವರಿಂದ ನೀಡಲ್ಪಟ್ಟ ಬಿಲ್ ಅನುಮೋದನೆಯ ಕಾರ್ಯವು ಹಣಕಾಸು ಸಹಕಾರ ಯೋಜನೆ ಮತ್ತು ಇತರ ಕೆಲವು ವಿವಾದಗಳಿಂದಾಗಿ ಮುಂದೂಡಲ್ಪಟ್ಟಿದೆ ಎಂಬುದಾಗಿ ತಿಳಿದುಬಂದಿದೆ.

PTI
'123 ಒಪ್ಪಂದವು ನಿಮಗೆ ತೃಪ್ತಿ ನೀಡಬೇಕು ಎಂಬುದು ನಮ್ಮ ಆಶಯವಾಗಿದೆ. ಆದುದರಿಂದ ಆದಷ್ಟು ಬೇಗನೇ ಒಪ್ಪಂದಕ್ಕೆ ಅನುಮೋದನೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಬುಷ್ ಆಡಳಿತವು ಕಾರ್ಯ ನಿರ್ವಹಿಸುತ್ತಿದೆ' ಎಂದು ಸಿಂಗ್ ಅವರೊಂದಿಗೆ ನಡೆದ 40 ನಿಮಿಷಗಳ ಮಾತುಕತೆಯ ವೇಳೆ ಬುಷ್ ತಿಳಿಸಿದರು.

ಭಾರತ ಅಮೆರಿಕ ಸಂಬಂಧದಲ್ಲಿ ಸುದೃಢ ಬದಲಾವಣೆಯನ್ನು ತರುವಲ್ಲಿನ ಬುಷ್ ಅವರ ಪ್ರಯತ್ನವನ್ನು ಇದೇ ವೇಳೆ ಶ್ಲಾಘಿಸಿದ ಸಿಂಗ್, ಒಪ್ಪಂದ ಪೂರ್ಣಗೊಂಡ ಬಳಿಕ, ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ಸಂಬಂಧವನ್ನು ವೃದ್ಧಿಸುವಲ್ಲಿ ಬುಷ್ ಐತಿಹಾಸಿಕ ಪಾತ್ರ ನಿರ್ವಹಿಸಿದ್ದಾರೆ ಎಂಬ ಕೀರ್ತಿಗೆ ಅಮೆರಿಕ ಅಧ್ಯಕ್ಷ ಬುಷ್ ಪಾತ್ರರಾಗಲಿದ್ದಾರೆ ಎಂದು ಸಿಂಗ್ ಅಭಿಪ್ರಾಯಪಟ್ಟರು.

ಕಳೆದ 34 ವರ್ಷಗಳಿಂದ ಭಾರತವು ಪರಮಾಣು ಪ್ರತ್ಯೇಕತಾ ನೀತಿಯಿಂದ ಬಳಲುತ್ತಿದ್ದು, ಇದನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನಾಗರಿಕ ಪರಮಾಣು ಒಪ್ಪಂದವನ್ನು ಅತ್ಯಂತ ಪ್ರಮುಖ ಒಪ್ಪಂದವಾಗಿ ಪರಿಗಣಿಸಲಾಗುತ್ತಿದೆ ಎಂದು ಸಿಂಗ್ ತಿಳಿಸಿದರು.
ಮತ್ತಷ್ಟು
ಪರಮಾಣು ಸಹಕಾರಕ್ಕೆ ಭಾರತ-ಚೀನಾ ಒಪ್ಪಿಗೆ
ಅಣು ಪರೀಕ್ಷೆ ನಡೆಸುವ ಹಕ್ಕು ನಮಗಿದೆ:ಭಾರತ
ಪಾಕ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ
ಅಮೆರಿಕ ಆರ್ಥಿಕತೆಯು ಅಪಾಯದಲ್ಲಿದೆ:ಬುಷ್
ಭಯೋತ್ಪಾದನೆ ದಮನಕ್ಕೆ ಸಿಂಗ್-ಜರ್ದಾರಿ ಪ್ರತಿಜ್ಞೆ
ಮೊಗಾದಿಶು ಘರ್ಷಣೆಗೆ 13 ಬಲಿ