ಅಫ್ಘಾನ್-ಪಾಕಿಸ್ತಾನ ಗಡಿ ಭಾಗದಲ್ಲಿ ಐದು ನಿಮಿಷಗಳ ಕಾಲ ಪಾಕಿಸ್ತಾನ ಮತ್ತು ಅಮೆರಿಕ ಪಡೆಗಳು ಗುಂಡಿನ ಚಕಮಕಿ ನಡೆಸಿವೆ ಎಂಬುದಾಗಿ ಅಮೆರಿಕ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನ್ ಗಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕನ್ ಹೆಲಿಕಾಫ್ಟರ್‌ಗಳ ಮೇಲೆ ಪಾಕಿಸ್ತಾನ ಪಡೆಗಳು ಗುಂಡುಹಾರಿಸಿದಾಗ, ಎರಡೂ ಪಡೆಗಳ ನಡುವೆ ಕದನವೇರ್ಪಟ್ಟಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಫ್ಘಾನ್ ಗಡಿ ಒಳಭಾಗದಲ್ಲಿ ಹೆಲಿಕಾಫ್ಟರ್ ಹಾರಾಟ ನಡೆಸುತ್ತಿದ್ದು, ಇದರ ಮೇಲೆ ಪಾಕ್ ಪಡೆಗಳು ಗುಂಡುಹಾರಿಸಿದಾಗ, ಅಮೆರಿಕ ಪಡೆಯು ಹೊರಪಾಳೆಯದ ಮೇಲೆ ಸಣ್ಣ ಪ್ರಮಾಣದಲ್ಲಿ ಗುಂಡುಹಾರಿಸಿತು. ನಂತರ ಎರಡೂ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜರ್ದಾರಿ ಆಕ್ರೋಶ ಏತನ್ಮಧ್ಯೆ, ಪಾಕ್ ಮತ್ತು ಅಮೆರಿಕ ಪಡೆಗಳ ನಡುವಿನ ಗುಂಡಿನ ಚಕಮಕಿಯ ಕುರಿತಾದ ವರದಿಗಳಿಗೆ ತೀಕ್ಷ್ಣವಾಗಿಯೇ ಪ್ರತಿಕ್ರಯಿಸಿರುವ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಅಮೆರಿಕದ ಮೇಲೆ ಹರಿಹಾಯ್ದಿದ್ದಾರೆ.
ವಿಶ್ವಸಂಸ್ಥೆ ಪ್ರಧಾನ ಅಧಿವೇಶನದಲ್ಲಿ ಮಾತನಾಡಿದ ಅವರು, ತನ್ನ ಪ್ರದೇಶದಲ್ಲಿ ಪಾಕಿಸ್ತಾನ ಮೈತ್ರಿದೇಶಗಳು ದಾಳಿ ಮಾಡಿದರೂ ತಾನದನ್ನು ಸಹಿಸುವುದಿಲ್ಲ ಎಂದು ಜರ್ದಾರಿ ಸ್ಪಷ್ಟಪಡಿಸಿದ್ದಾರೆ.
|