ಇಸ್ಲಾಮಾಬಾದಿನ ಮ್ಯಾರಿಯಟ್ ಹೋಟೆಲ್‌ನಲ್ಲಿ ಇತ್ತೀಚಿಗೆ ನಡೆದ ಭೀಕರ ಬಾಂಬ್ ದಾಳಿಯ ರೂವಾರಿ ಎಂಬುದಾಗಿ ಖಾರಿ ಜಾಫರ್ ಎಂದು ಶಂಕಿಸಲಾಗಿದೆ ಎಂದು ಪಾಕಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.
ಖಾರಿ ಜಾಫರ್ , ಪಾಕಿಸ್ತಾನ ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹ್ಸುದ್‌ನ ಸಮೀಪವರ್ತಿಯಾಗಿದ್ದು, ವಾಸ್ತವವಾಗಿ, ವಾಯುವ್ಯ ಗಡಿ ಪ್ರಾಂತ್ಯದ ದಕ್ಷಿಣ ವಜರಿಸ್ತಾನದಲ್ಲಿ ಈತ ಅಡಗಿರುವುದಾಗಿ ಶಂಕಿಸಲಾಗಿದೆ ಎಂದು ವರದಿಗಳು ಹೇಳಿವೆ.
ಜಾಫರ್ ತನ್ನದೇ ನೆಟ್ವರ್ಕ್ ಜಾಲವನ್ನು ಹೊಂದಿದ್ದು, ಇದು ಕರಾಚಿಯ ಸೇನಾ ಕಾರ್ಯಾಲಯ, ಪಾಕಿಸ್ತಾನ ಆಂತರಿಕ ಸೇವಾ ಗುಪ್ತಚರ ಸಂಸ್ಥೆ, ದೇಶದಲ್ಲಿನ ಪೊಲೀಸ್ ಠಾಣೆ ಮುಂತಾದ ಕಡೆಗಳಲ್ಲಿ ಗುರಿಯನ್ನು ಹೊಂದುವ ಸಾಧ್ಯತೆ ಇತ್ತು ಎಂದು ಭದ್ರತಾ ಅಧಿಕಾರಿಗಳು ಸೂಚಿಸಿದ್ದಾರೆ.
ಗುರುವಾರ ಬಂಧಿಸಲಾದ ಇಬ್ಬರು ಶಂಕಿತ ಉಗ್ರರು ಮ್ಯಾರಿಯಟ್ ಹೋಟೇಲ್ ಸ್ಫೋಟದ ನಂತರ ಜಾಫರ್‌ಗೆ ಅಭಿನಂದನೆ ಸಲ್ಲಿಸಿರುವುದಾಗಿ ಡೈಲಿ ಟೈಮ್ಸ್ ವರದಿ ಮಾಡಿವೆ.
ಕರಾಚಿ ಮೂಲದವನಾದ ಜಾಫರ್ , ಮೊದಲು ನಿಷೇಧಿತ ಲಷ್ಕರ್ ಇ ಜಾಂಗ್ವಿ ಸಮೂದಲ್ಲಿದ್ದನು. ಲಾಹೋರ್‌ನ ಭದ್ರತಾ ಸೇವಾ ಕಸ್ಟಡಿಯಿಂದ 2007ರಲ್ಲಿ ಪರಾರಿಯಾಗಿದ್ದನು.
|