ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕದಲ್ಲಿ ಭಾರತದ 2 ರಾಯಭಾರಿ ಕಚೇರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕದಲ್ಲಿ ಭಾರತದ 2 ರಾಯಭಾರಿ ಕಚೇರಿ
ಅಮೆರಿಕಾದ ಅಟ್ಲಾಂಟಾ ಮತ್ತು ಸೀಟಲ್ ನಗರಗಳಲ್ಲಿ ಈ ವರ್ಷ ಎರಡು ರಾಯಭಾರಿ ಕೇಂದ್ರಗಳನ್ನು ಭಾರತವು ಪ್ರಾರಂಭಿಸುವ ಸಂಭಾವ್ಯತೆ ಇದ್ದು, ವಾಷಿಂಗ್ಟನ್‌ನಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ನಡುವೆ ನಡೆದ ಮಾತುಕತೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ತಿಳಿಸಿದ್ದಾರೆ.

ಈ ಎರಡು ನಗರಗಳಲ್ಲಿ ರಾಯಭಾರಿ ಕೇಂದ್ರಗಳನ್ನು ಪ್ರಾರಂಭಿಸುವ ಕುರಿತಾದ ನಿರ್ಧಾರದಲ್ಲಿ ಪ್ರತಿ ಸಮುದಾಯದ ಗಾತ್ರ ಮತ್ತು ವಾಣಿಜ್ಯ ಹಿತಾಸಕ್ತಿಗಳನ್ನು ಪ್ರಮುಖ ಅಂಶವಾಗಿ ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸೀಟೆಲ್ ಮತ್ತು ಅಟ್ಲಾಂಟಾ ಈ ಎರಡೂ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಮುದಾಯವಿದೆ.

ಇನ್ನೂ ಹೆಚ್ಚಿನ ರಾಯಭಾರಿ ಕೇಂದ್ರಗಳನ್ನು ಪ್ರಾರಂಭಿಸುವ ಯೋಜನೆಯಿದೆಯೇ ಎಂದು ಇದೇ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೆನನ್, ಇನ್ನಷ್ಟು ಹೆಚ್ಚಿನ ರಾಯಭಾರ ಕೇಂದ್ರಗಳನ್ನು ಸ್ಥಾಪಿಸಲು ಸರಕಾರವು ಆಸಕ್ತಿ ಹೊಂದಿದ್ದು, ಆದರೆ, ಇದಕ್ಕೆ ಹೆಚ್ಚಿನ ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ.

ಪ್ರಸಕ್ತ, ಭಾರತವು ಅಮೆರಿಕದಲ್ಲಿ ವಾಷಿಂಗ್ಟನ್, ನ್ಯೂಯಾರ್ಕ್, ಹಾಸ್ಟನ್, ಚಿಕಾಗೋ, ಸನ್ ಫ್ರಾನ್ಸಿಸ್ಕೋ ಮುಂತಾದ ಕಡೆಗಳಲ್ಲಿ ರಾಯಭಾರಿ ಕಚೇರಿಗಳನ್ನು ಹೊಂದಿದೆ.
ಮತ್ತಷ್ಟು
ಪಾಕಿಸ್ತಾನ ರೈಲಿನಲ್ಲಿ ಸ್ಫೋಟ:6 ಸಾವು
ಮ್ಯಾರಿಯಟ್ ಸ್ಫೋಟ ರೂವಾರಿ ಜಾಫರ್‌ ?
ಪಾಕ್-ಅಮೆರಿಕ ಪಡೆಗಳ ನಡುವೆ ಗುಂಡಿನ ಚಕಮಕಿ
ಶೀಘ್ರವೇ 'ಅಣುಮೋದನೆ' ಪ್ರಧಾನಿಗೆ ಬುಷ್ ಭರವಸೆ
ಪರಮಾಣು ಸಹಕಾರಕ್ಕೆ ಭಾರತ-ಚೀನಾ ಒಪ್ಪಿಗೆ
ಅಣು ಪರೀಕ್ಷೆ ನಡೆಸುವ ಹಕ್ಕು ನಮಗಿದೆ:ಭಾರತ