ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ಅಣುಮೋದನೆ' ಭವಿಷ್ಯ ಇಂದು ನಿರ್ಧಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅಣುಮೋದನೆ' ಭವಿಷ್ಯ ಇಂದು ನಿರ್ಧಾರ
PTI
ಭಾರತ ಅಮೆರಿಕ ಪರಮಾಣು ಒಪ್ಪಂದದ ಕುರಿತಾಗಿ ಅಮೆರಿಕ ಸದನ ಪ್ರಾಧಿಕಾರ ಶುಕ್ರವಾರ ರಾತ್ರಿ ಚರ್ಚೆ ನಡೆಸಿದ್ದು, ಆದರೆ, ಅನುಮೋದನೆ ಮತದಾನವನ್ನು ಶನಿವಾರಕ್ಕೆ ಮುಂದೂಡಲಾಗಿದೆ.

ಅಮೆರಿಕ ಕಾಂಗ್ರೆಸ್‌ನ 435 ಸದಸ್ಯರನ್ನೊಳಗೊಂಡ 40 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ ಪರಮಾಣು ಒಪ್ಪಂದ ವಿರೋಧಿಯಾಗಿದ್ದ ಹಾವರ್ಡ್ ಬರ್ಮನ್ 123 ಒಪ್ಪಂದವನ್ನು ಸದನದಲ್ಲಿ ಬೆಂಬಲಿಸಿರುವುದು ವಿಶೇಷವಾಗಿತ್ತು.

ಅಮೆರಿಕ ಕಂಪನಿಗಳಿಗೆ ಭಾರತಕ್ಕೆ ಪರಮಾಣು ಇಂಧನ ಮತ್ತು ತಂತ್ರಜ್ಞಾನ ಮಾರಾಟಕ್ಕೆ ಅನುವು ಮಾಡಿಕೊಡುವ ಅಮೆರಿಕ ಪರಮಾಣು ಇಂಧನ ಕಾಯಿದೆಯ ತಿದ್ದುಪಡಿಯನ್ನು ಹೊಂದಿದ ಮಸೂದೆಯನ್ನು ಬುಷ್ ಆಡಳಿತ ಮತ್ತು ಕಾನೂನುತಜ್ಞರ ನಡುವೆ ಸುಮಾರು 24 ಗಂಟೆಗಳ ಸಮಾಲೋಚನೆಯ ನಂತರ ಸದನದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಅಮೆರಿಕ ಸೆನೆಟ್‌ನಲ್ಲಿ ಈ ಮಸೂದೆಗೆ ಇನ್ನಷ್ಟೇ ಮತದಾನ ನಡೆಯಬೇಕಾಗಿದ್ದು, ಇದು ಮುಂದಿನ ವಾರವಷ್ಟೇ ನಡೆಯಲಿದೆ.

ಏನೇ ಆದರೂ, ಅಕ್ಟೋಬರ್ ಮೂರರಂದು ಈ ಒಪ್ಪಂದಕ್ಕೆ ಭಾರತದಲ್ಲಿ ಸಹಿ ಹಾಕಲಾಗುವುದಾಗಿ ಮೂಲಗಳು ತಿಳಿಸಿದ್ದು, ಇದೇ ವೇಳೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಅವರೂ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಒಪ್ಪಂದದ ಶೀಘ್ರ ಅನುಮೋದನೆಗಾಗಿ ಅಣು ಒಪ್ಪಂದ ಮುಂದುವರಿಕೆಯಲ್ಲಿ ನಿರ್ಣಾಯಕರಾಗಿರುವ ಸದನ ಪ್ರಾಧಿಕಾರದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರಿಗೆ ರೈಸ್ ಪತ್ರ ಸಲ್ಲಿಸಿದ್ದಾರೆ.
ಮತ್ತಷ್ಟು
ಮಾತುಕತೆಯೇ ಪರಿಹಾರ : ಜರ್ದಾರಿ
ಅಮೆರಿಕದಲ್ಲಿ ಭಾರತದ 2 ರಾಯಭಾರಿ ಕಚೇರಿ
ಪಾಕಿಸ್ತಾನ ರೈಲಿನಲ್ಲಿ ಸ್ಫೋಟ:6 ಸಾವು
ಮ್ಯಾರಿಯಟ್ ಸ್ಫೋಟ ರೂವಾರಿ ಜಾಫರ್‌ ?
ಪಾಕ್-ಅಮೆರಿಕ ಪಡೆಗಳ ನಡುವೆ ಗುಂಡಿನ ಚಕಮಕಿ
ಶೀಘ್ರವೇ 'ಅಣುಮೋದನೆ' ಪ್ರಧಾನಿಗೆ ಬುಷ್ ಭರವಸೆ