ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನೂತನ ಹಣಕಾಸು ವ್ಯವಸ್ಥೆಗೆ ಭಾರತ-ಬ್ರಿಟನ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೂತನ ಹಣಕಾಸು ವ್ಯವಸ್ಥೆಗೆ ಭಾರತ-ಬ್ರಿಟನ್ ಆಗ್ರಹ
PTI
ಅಮೆರಿಕ ಆರ್ಥಿಕ ಕುಸಿತ ಮುಂತಾದ ಹಣಕಾಸು ಬಿಕ್ಕಟ್ಟುಗಳ ನಿಯಂತ್ರಣಕ್ಕಾಗಿ, ಐಎಂಎಫ್ ಮತ್ತು ವಿಶ್ವಬ್ಯಾಂಕ್‌ನಿಂದ ವಿಭಿನ್ನವಾಗಿರುವ ಅಂತಾರಾಷ್ಟ್ರೀಯ ಕೇಂದ್ರ ಬ್ಯಾಂಕ್ ಮತ್ತು ಹಣಕಾಸು ಪ್ರಾಧಿಕಾರದ ಅಗತ್ಯವಿದೆ ಎಂದು ಭಾರತ ಮತ್ತು ಬ್ರಿಟನ್ ಒತ್ತಾಯಿಸಿದೆ.

ವಿಶ್ವಸಂಸ್ಥೆ ಪ್ರಧಾನ ಅಧಿವೇಶನದ ವೇಳೆ ನ್ಯೂಯಾರ್ಕ್‌ನಲ್ಲಿ ಭೇಟಿಯಾದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಬ್ರಿಟಿಶ್ ಪ್ರಧಾನಿ ಗಾರ್ಡನ್ ಬ್ರೌನ್, ಭಯೋತ್ಪಾದನೆ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಮತ್ತು ದ್ವಿಪಕ್ಷೀಯ ವಿವಾದಗಳ ಬಗ್ಗೆ ಮಾತುಕತೆ ನಡೆಸಿದರು.

ಏನೇ ಆದರೂ, ಉಭಯ ನಾಯಕರ ನಡುವಿನ ಮಾತುಕತೆಯಲ್ಲಿ ಅಮೆರಿಕ ಆರ್ಥಿಕ ಬಿಕ್ಕಟ್ಟು ಪ್ರಧಾನ ಅಂಶವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಆರ್ಥಿಕ ಬಿಕ್ಕಟ್ಟಿನಂತಹ ಸಮಸ್ಯೆಗಳ ಪರಿಹಾರಕ್ಕೆ ಪ್ರಸಕ್ತವಿರುವ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯು ಸಮರ್ಪಕವಾಗಿಲ್ಲ ಎಂಬುದಾಗಿ ಎರಡೂ ನಾಯಕರು ಮಾತುಕತೆಯ ವೇಳೆ ಅಭಿಪ್ರಾಯಪಟ್ಟಿರುವುದಾಗಿ ಮೂಲಗಳು ಹೇಳಿವೆ.
ಮತ್ತಷ್ಟು
'ಅಣುಮೋದನೆ' ಭವಿಷ್ಯ ಇಂದು ನಿರ್ಧಾರ
ಮಾತುಕತೆಯೇ ಪರಿಹಾರ : ಜರ್ದಾರಿ
ಅಮೆರಿಕದಲ್ಲಿ ಭಾರತದ 2 ರಾಯಭಾರಿ ಕಚೇರಿ
ಪಾಕಿಸ್ತಾನ ರೈಲಿನಲ್ಲಿ ಸ್ಫೋಟ:6 ಸಾವು
ಮ್ಯಾರಿಯಟ್ ಸ್ಫೋಟ ರೂವಾರಿ ಜಾಫರ್‌ ?
ಪಾಕ್-ಅಮೆರಿಕ ಪಡೆಗಳ ನಡುವೆ ಗುಂಡಿನ ಚಕಮಕಿ