ಅಮೆರಿಕ ಮತ್ತು ಪಾಕಿಸ್ತಾನ ಪಡೆಗಳ ನಡುವಿನ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸಂಘರ್ಷದ ಅಂತ್ಯಕ್ಕೆ ಅಮೆರಿಕ ಮತ್ತು ಪಾಕಿಸ್ತಾನವು ಪ್ರಯತ್ನಿಸಬೇಕಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ ಮತ್ತು ಅಮೆರಿಕ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದ ಬಳಿಕ ಎರಡೂ ಪಡೆಗಳ ನಡುವಿನ ಸಂಘರ್ಷ ಬಿಗಡಾಯಿಸಿತ್ತು.
ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸುವ ಸಂಬಂಧ ಪಾಕಿಸ್ತಾನ ಸರಕಾರದೊಂದಿಗೆ ಅಮೆರಿಕವು ಮಾತುಕತೆ ನಡೆಸುತ್ತಿದೆ ಎಂದು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ರೈಸ್ ಅವರು ಹೇಳಿರುವುದನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ.
ಪಾಕಿಸ್ತಾನವು ಏನು ಮಾಡಬೇಕಾದ ಅಗತ್ಯವಿದೆಯೋ ಅದಕ್ಕಾಗಿ ಅಮೆರಿಕವು ಪಾಕಿಸ್ತಾನಕ್ಕೆ ಸಹಕರಿಸಲಿದೆ ಎಂಬುದಾಗಿ ಮಾತುಕತೆಯ ವೇಳೆ ರೈಸ್ ಜರ್ದಾರಿಗೆ ಭರವಸೆ ನೀಡಿರುವುದಾಗಿ ವರದಿಗಳು ತಿಳಿಸಿವೆ.
|