ನೇಪಾಳದಲ್ಲಿನ ನೂತನ ಮಾವೋ ಆಡಳಿತದೊಂದಿಗೆ ಉತ್ತಮ ಸಂಬಂಧ ವೃದ್ಧಿಸುವ ಸೂಚನೆಯೊಂದಿಗೆ, ಚೀನಾವು ನೇಪಾಳಕ್ಕೆ 62.5 ದಶಲಕ್ಷ ಸೇನಾ ಸಹಾಯವನ್ನು ನೀಡಲಿದೆ.
ನೇಪಾಳ ರಕ್ಷಣಾ ಸಚಿವ ರಾಮ್ ಬಹಾದ್ದೂರ್ ತಾಪಾ 'ಬದಾಲ್' ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ನೇಪಾಳ ಮಣ್ಣಿನಲ್ಲಿ ಚೀನಾದ ವಿರುದ್ಧ ಯಾವುದೇ ಅಹಿತಕರ ಘಟನೆ ನಡೆಯಲು ಬಿಡುವುದಿಲ್ಲ ಎಂದು ನೇಪಾಳವು ಇದೇ ವೇಳೆ ಭರವಸೆ ನೀಡಿರುವುದಾಗಿ ವರದಿಗಳು ತಿಳಿಸಿವೆ.
ಸೇನಾ ಸಹಾಯದ ಹೊರತಾಗಿ, ಕೇಂದ್ರ ನೇಪಾಳದ ಚಿತಾವನ್ ಜಿಲ್ಲೆಯಲ್ಲಿರುವ ಬಿಪಿ ಕೊಯಿರಾಲಾ ಮೆಮೋರಿಯಲ್ ಮೆಡಿಕಲ್ ಆಸ್ಪತ್ರೆಗೆ 20,000 ಡಾಲರ್ ವೆಚ್ಚದ ಔಷಧವನ್ನು ಕೊಡುಗೆಯಾಗಿ ನೀಡಿದೆ.
ಚೀನಾ ಸಹಕಾರದೊಂದಿಗೆ ಒಂಬತ್ತು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಈ ಆಸ್ಪತ್ರೆಗೆ ನೇಪಾಳದಲ್ಲಿನ ಚೀನಾ ರಾಯಭಾರಿ ಈ ಔಷಧಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಿದ್ದರು.
|