ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಬಂಧಕ್ಕೆ ಯುಎಸ್ ಪ್ರಜಾಪ್ರತಿನಿಧಿ ಸಭೆ ಅಂಕಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧಕ್ಕೆ ಯುಎಸ್ ಪ್ರಜಾಪ್ರತಿನಿಧಿ ಸಭೆ ಅಂಕಿತ
ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಪೂರಕ ಎಂಬಂತೆ ಭಾನುವಾರ ಅಮೆರಿಕದ ಪ್ರಜಾಪ್ರತಿನಿಧಿ ಸಭೆ ಅನುಮೋದನೆ ನೀಡಿದ್ದು,ಇದೀಗ ಸೆನೆಟ್ ಮುಂದೆ ಕರಡನ್ನು ಮಂಡಿಸಲು ಸಿದ್ದತೆ ನಡೆಸಿದೆ.

ಅಮೆರಿಕ ಕಾಂಗ್ರೆಸ್ ಗ್ರೀನ್ ಸಿಗ್ನಲ್ ನೀಡುವ ಮುನ್ನ ಹಲವಾರು ನಾಟಕಗಳ ತರುವಾಯ ಮತ್ತು ಹಲವು ನಿಗೂಢತೆಗಳ ನಡುವೆ ಅಮೆರಿಕ ಪ್ರಜಾಪ್ರತಿನಿಧಿ ಸಭೆ ಅಣುಬಂಧಕ್ಕೆ ಇಂದು ಅಂಕಿತ ನೀಡಿತ್ತು.

ಆದರೆ ಅಮೆರಿಕ ಹೌಸ್ ಶನಿವಾರ ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕಿತ್ತಾದರೂ ಮತ್ತೂ ಒಂದು ದಿನವನ್ನು ಕಳೆಯುವ ಮೂಲಕ ಅಣುಒಪ್ಪಂದದ ಅಂಕಿತ ಕಗ್ಗಂಟಾಗಿಯೇ ಮುಂದುವರಿದೆ.

ಈಗಲೂ ಡೆಮೋಕ್ರೆಟಿಕ್ ಸದಸ್ಯರು ಈ ಒಪ್ಪಂದವನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ ವಿರೋಧ ಪಕ್ಷದ ಡೆಮೋಕ್ರಟರ್ ಬೆರ್ಮಾನ್ ಬಿಲ್ ಎಚ್.ಆರ್ ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದ(ಸಿಟಿಬಿಟಿ)ಯನ್ವಯ ಭಾರತ-ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಅಂತಿಮವಾಗಿ ಬಿಲ್ ತನ್ನ ನಿರ್ಧಾರದಲ್ಲಿ ಬದಲಾವಣೆ ತಂದ ಪರಿಣಾಮ ಅಣು ಒಪ್ಪಂದಕ್ಕೆ ವಿದೇಶಾಂಗ ವ್ಯವಹಾರಗಳ ಸಮಿತಿ ಈ ವಾರ ನಡೆದ ಮತದಾನದಲ್ಲಿ 298 ಮತ ಒಪ್ಪಂದದ ಪರವಾಗಿ ಚಲಾವಣೆಗೊಂಡಿದ್ದರೆ,117ವಿರೋಧವಾಗಿ ಬಿದ್ದಿದ್ದವು. ಇದೀಗ ಅಂತಿಮವಾಗಿ ಅಮೆರಿಕ ಕಾಂಗ್ರೆಸ್‌ನ ಅಂಕಿತ ಮುದ್ರೆ ಬೀಳಲು ಬಾಕಿಯಿದ್ದು,ಅದು ಮುಂದಿನ ವಾರ ಮತದಾನ ನಡೆಯಲಿದ್ದು ಅದಕ್ಕಾಗಿ ಸಿದ್ದತೆ ನಡೆಸಿದೆ.
ಮತ್ತಷ್ಟು
ಬಾಂಬ್‌ಸ್ಫೋಟ: ಬಾನ್ ಖಂಡನೆ
ಪಾಕ್ ಸಹಕಾರಕ್ಕೆ ಒಟ್ಟಾದ ಅಂತಾರಾಷ್ಟ್ರೀಯ ಸಮೂಹ
ನೇಪಾಳಕ್ಕೆ ಚೀನಾದಿಂದ 62.5 ಮಿಲಿಯನ್ ಸಹಕಾರ
ಸೇನಾ ಸಂಘರ್ಷ ಪರಿಹಾರಕ್ಕೆ ಯುಎಸ್,ಪಾಕ್ ಪ್ರಯತ್ನ: ರೈಸ್
ನೂತನ ಹಣಕಾಸು ವ್ಯವಸ್ಥೆಗೆ ಭಾರತ-ಬ್ರಿಟನ್ ಆಗ್ರಹ
'ಅಣುಮೋದನೆ' ಭವಿಷ್ಯ ಇಂದು ನಿರ್ಧಾರ