ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕ ದಾಳಿಯಿಂದ ಅಲ್‌ಖೈದಾ ಕ್ಷೀಣಿಸಿಲ್ಲ: ಸಮೀಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ದಾಳಿಯಿಂದ ಅಲ್‌ಖೈದಾ ಕ್ಷೀಣಿಸಿಲ್ಲ: ಸಮೀಕ್ಷೆ
ಅಮೆರಿಕ ನೇತೃತ್ವದ ಭಯೋತ್ಪಾದನೆಯ ವಿರುದ್ಧದ ಕದನವು ಅಲ್‌ಖೈದಾ ಸಂಘಟನೆಯ ಶಕ್ತಿಯನ್ನು ಕ್ಷೀಣಿಸಿಲ್ಲ ಬದಲಾಗಿ ಇದು ಒಸಾಮಾ ಬಿನ್ ಲಾಡೆನ್‌ನ ಜಾಲವನ್ನು ಇನ್ನಷ್ಟು ಬಲಗೊಳಿಸಿದೆ ಎಂಬುದಾಗಿ ಅನೇಕ ಮಂದಿ ನಂಬಿರುವುದಾಗಿ ಬಿಬಿಸಿ ವಿಶ್ವ ಸೇವೆಯ ಸಮೀಕ್ಷೆಯು ತಿಳಿಸಿದೆ.

ಈ ಸಮೀಕ್ಷೆಯಲ್ಲಿ 23 ರಾಷ್ಟ್ರಗಳಲ್ಲಿನ 22 ರಾಷ್ಟ್ರಗಳ ಸುಮಾರು 24,000 ಮಂದಿ ಸೆಪ್ಟೆಂಬರ್ 11, 2001ರಂದು ಅಮೆರಿಕದ ಮೇಲೆ ದಾಳಿ ನಡೆಸಿದ ನಂತರ ಅಲ್‌ಖೈದಾ ಮೇಲಿನ ದಾಳಿಯಿಂದಾಗಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ತನ್ನ ಸೇನಾ ಶಕ್ತಿಯ ವಿನಾಶದ ಹೊರತಾಗಿ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಅಮೆರಿಕವು ಏನನ್ನೂ ಸಾಧಿಸಲಿಲ್ಲ. ಇದರಿಂದ ಅಲ್‌ಖೈದಾ ಶಕ್ತಿಯು ಇನ್ನಷ್ಟು ಬಲಗೊಂಡಿದೆ ಎಂದು ಸಮೀಕ್ಷಾ ವರದಿಗಳು ತಿಳಿಸಿವೆ.

ಫ್ರಾನ್ಸ್, ಮೆಕ್ಸಿಕೋ, ಇಟಲಿ, ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನ ಸುಮಾರು ಶೇ.40ಕ್ಕಿಂತಲೂ ಹೆಚ್ಚು ಮಂದಿ ಇದೇ ಅಬಿಪ್ರಾಯ ಹೊಂದಿದ್ದಾರೆ ಎಂದು ವರದಿಗಳು ಹೇಳಿವೆ.
ಮತ್ತಷ್ಟು
ಅಣುಬಂಧಕ್ಕೆ ಯುಎಸ್ ಪ್ರಜಾಪ್ರತಿನಿಧಿ ಸಭೆ ಅಂಕಿತ
ಬಾಂಬ್‌ಸ್ಫೋಟ: ಬಾನ್ ಖಂಡನೆ
ಪಾಕ್ ಸಹಕಾರಕ್ಕೆ ಒಟ್ಟಾದ ಅಂತಾರಾಷ್ಟ್ರೀಯ ಸಮೂಹ
ನೇಪಾಳಕ್ಕೆ ಚೀನಾದಿಂದ 62.5 ಮಿಲಿಯನ್ ಸಹಕಾರ
ಸೇನಾ ಸಂಘರ್ಷ ಪರಿಹಾರಕ್ಕೆ ಯುಎಸ್,ಪಾಕ್ ಪ್ರಯತ್ನ: ರೈಸ್
ನೂತನ ಹಣಕಾಸು ವ್ಯವಸ್ಥೆಗೆ ಭಾರತ-ಬ್ರಿಟನ್ ಆಗ್ರಹ