ಅಮೆರಿಕ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಸಾರಾ ಪಾಲಿನ್ ಅವರೊಂದಿಗಿನ ಅನುಚಿತ ವರ್ತನೆಯ ವಿರುದ್ಧ ಪಾಕಿಸ್ತಾನ ಲಾಲ್ ಮಸ್ಜಿದ್ ಧರ್ಮಗುರುಗಳು ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಮೇಲೆ ಫತ್ವಾ ಹೊರಡಿಸಿದ್ದಾರೆ.
ಇದೊಂದು ಇಸ್ಲಾಮ್ ವಿರೋಧಿ ವರ್ತನೆ ಎಂದು ಹೇಳಿರುವ ಇಸ್ಲಾಂ ಧರ್ಮ ಗುರುಗಳು, ಜರ್ದಾರಿ ದೇಶಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.
ಮುಸ್ಲೀಮೇತರ ಮಹಿಳೆಯೊಂದಿಗಿನ ಜರ್ದಾರಿಯ ಅವರ ತೋರಿಕಾ ಪ್ರಣಯವು ಇಸ್ಲಾಂ ವಿರೋಧಿ ಜೊತೆಗೆ ಮುಸ್ಲಿಂ ರಾಷ್ಟ್ರದ ಅಧ್ಯಕ್ಷರಾಗಲು ಇದು ಅಡ್ಡಿ ಉಂಟಾಗಲಿದೆ ಎಂದು ಲಾಲ್ ಮಸ್ಜಿದ್ ಧರ್ಮಗುರು ಮೌಲಾನಾ ಅಬ್ದುಲ್ ಗಫರ್ ಸ್ಪಷ್ಟಪಡಿಸಿದ್ದಾರೆ.
ಪಾಲಿನ್ ಅವರೊಂದಿಗಿನ ಜರ್ದಾರಿ ಅವರ ಅಂಗವರ್ತನೆ, ಮತ್ತು ಆಕೆಯನ್ನು ಆಲಿಂಗಿಸಬೇಕೆಂಬ ಜರ್ದಾರಿ ಅವರ ಬಯಕೆಯು ದೇಶಕ್ಕೆ ಅವಮಾನ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆ ಅಧಿವೇಶನದಲ್ಲಿ ಪಾಲಿನ್ ಅವರನ್ನು ಬೇಟಿ ಮಾಡಿದ ವೇಳೆ ಜರ್ದಾರಿ, ಆಕೆಯನ್ನು ಅಪ್ಸರೆ ಎಂದು ಬಣ್ಣಿಸಿದ್ದು, ಅಮೆರಿಕವು ಯಾಕೆ ನಿಮ್ಮ ಬೆನ್ನಹಿಂದಿದೆ ಎಂಬುದಾಗಿ ನನಗೀಗ ತಿಳಿಯಿತು ಎಂದು ಹೇಳಿದ್ದರು. ಅಲ್ಲದೆ, ಕ್ಯಾಮರಾ ಮುಂದೆ ಶೇಕ್‌ಹ್ಯಾಂಡ್ ಮಾಡಲು ಹೇಳಿದ ಜರ್ದಾರಿ, ತನ್ನ ಸಹವರ್ತಿ ಅನುಮತಿ ನೀಡಿದಲ್ಲಿ ಆಲಿಂಗಿಸಲು ಸಿದ್ಧ ಎಂಬ ಭಯಕೆಯನ್ನು ತೋಡಿಕೊಂಡಿದ್ದರು. |
|