ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕೆಂಬ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಆದೇಶವನ್ನು ತಿರಸ್ಕರಿಸಿರುವ ಇರಾನ್, ತನ್ನ ಪರಮಾಣು ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇರಾನ್ ಪರಮಾಣನ್ನು ಶಸ್ತ್ರಾಸ್ತ್ರ ನಿರ್ಮಾಣಕ್ಕಾಗಿ ಬಳಸುತ್ತದೆ ಎಂಬುದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಭೀತಿ ಹೊಂದಿರುವ ಹಿನ್ನೆಲೆಯಲ್ಲಿ, ಪರಮಾಣು ಸಂವರ್ಧನೆ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಇರಾನ್‌ಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯು ಆದೇಶ ನೀಡಿತ್ತು.
ಕೇವಲ ಶಾಂತಿ ಪ್ರಕ್ರಿಯೆಗಾಗಿ ಮಾತ್ರವೇ ಪರಮಾಣು ಕಾರ್ಯ ನಡೆಸುತ್ತಿರುವುದಾಗಿ ಪುನರುಚ್ಚರಿಸಿರುವ ಇರಾನ್, ವಿಶ್ವಸಂಸ್ಥೆಯ ಈ ತೀರ್ಮಾನವನ್ನು ತಳ್ಳಿಹಾಕಿದೆ. ಅಲ್ಲದೆ, ವಿಶ್ವಸಂಸ್ಥೆಯ ಈ ಬೇಡಿಕೆಯನ್ನು ಇರಾನ್ ಒಪ್ಪಿಕೊಳ್ಳುವುದಿಲ್ಲ ಎಂಬುದಾಗಿ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಹಸನ್ ಖಶ್ವಾಕಿ ಸ್ಪಷ್ಟಪಡಿಸಿದ್ದಾರೆ.
ವಿಶ್ವದ ನಾಲ್ಕನೇ ಅತಿ ದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿರುವ ಇರಾನ್, ವಿದ್ಯುತ್ ಉತ್ಪಾದನೆಗಾಗಿ ಪರಮಾಣು ತಂತ್ರಜ್ಞಾನದ ಅಗತ್ಯವಿದೆ ಇದರಿಂದ ಹೆಚ್ಚು ಹೈಡ್ರೋಕಾರ್ಬನ್‌ಗಳನ್ನು ರಫ್ತು ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ. |
|