ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಐಎಸ್ಐಗೆ ಹೊಸ ಮುಖ್ಯಸ್ಥ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಐಎಸ್ಐಗೆ ಹೊಸ ಮುಖ್ಯಸ್ಥ ನೇಮಕ
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಶಂಕೆಯ ಕಣ್ಣಿಗೆ ಯಾವತ್ತೂ ತುತ್ತಾಗಿರುವ ಪಾಕಿಸ್ತಾನದ ಪ್ರಮುಖ ಬೇಹುಗಾರಿಕಾ ಸಂಸ್ಥೆ ಐಎಸ್ಐ (ಇಂಟರ್ ಸರ್ವಿಸಸ್ ಇಂಟಲಿಜೆನ್ಸ್)ಗೆ ಪಾಕ್ ಸರಕಾರವು ಹೊಸ ಮುಖ್ಯಸ್ಥನನ್ನು ನೇಮಿಸಿದೆ.

ಮಿಲಿಟರಿ ಕಾರ್ಯಾಚರಣೆ ವಿಭಾಗದ ಮಾಜಿ ನಿರ್ದೇಶಕರಾಗಿದ್ದ ಲೆ.ಜ.ಅಹ್ಮದ್ ಶುಝಾ ಪಾಷಾ ಅವರು ಐಎಸ್ಐ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಎಂದು ಸೇನಾ ಹೇಳಿಕೆ ತಿಳಿಸಿದೆ.

ಹಲವು ಪ್ರಮುಖ ಹುದ್ದೆಗಳಿಗೆ ಹೊಸಬರ ನೇಮಕವಾಗಿದ್ದು, ಮಿಲಿಟರಿ ಅಧಿಕಾರಿ ವರ್ಗದಲ್ಲಿ ಇದೊಂದು ಪ್ರಮುಖ ಸರ್ಜರಿ ಎಂದು ಭಾವಿಸಲಾಗಿದೆ.

ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ಇತ್ತೀಚೆಗೆ ಉಗ್ರಗಾಮಿಗಳ ವಿರುದ್ಧದ ಹೋರಾಟದಲ್ಲಿ ಪಾಷಾ ಅವರು ಮಿಲಿಟರಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. ಈ ಪ್ರದೇಶದಲ್ಲಿ ಕೆಲವು ಭಾಗಗಳು ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಮತ್ತು ನ್ಯಾಟೋ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದ ತಾಲಿಬಾನ್ ಹಾಗೂ ಅಲ್ ಖಾಯಿದಾ ಉಗ್ರಗಾಮಿಗಳ ನೆಲೆಗಳಾಗಿದ್ದವು.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ಐಎಸ್ಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಲೆ.ಜ.ನದೀಮ್ ತಾಜ್ ಅವರ ಸ್ಥಾನಕ್ಕೆ ಪಾಷಾ ಇದೀಗ ಆಯ್ಕೆಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದಲ್ಲಾಗಿದ್ದು ಕ್ರಿಶ್ಚಿಯನ್ 'ನರಮೇಧ'ವಂತೆ!
ಪರಮಾಣು ಸ್ಥಗಿತವಿಲ್ಲ: ವಿಶ್ವಸಂಸ್ಥೆಗೆ ಇರಾನ್‌‌ ತಿರುಗೇಟು
ಹಣಕಾಸು ಪ್ಯಾಕೇಜ್‌ಗೆ ಸೋಲು: ಬುಷ್‌ಗೆ ತೀವ್ರ ಹಿನ್ನಡೆ
ಫ್ಲರ್ಟ್ ಪುರಾಣ-ಜರ್ದಾರಿ ವಿರುದ್ಧ ಫತ್ವಾ
ಭಯೋತ್ಪಾದನೆ: ಜರ್ದಾರಿ ನಿಲುವಿಗೆ ಕರ್ಜಾಯ್ ಬೆಂಬಲ
ಸರ್ ಕ್ರೀಕ್ ವಿವಾದ ಶೀಘ್ರವೇ ಮುಕ್ತಿ:ಪಾಕ್