ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಚೀನಾ ಕ್ಷೀರ ಹಗರಣ: 27 ಮಂದಿ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನಾ ಕ್ಷೀರ ಹಗರಣ: 27 ಮಂದಿ ಸೆರೆ
ಚೀನಾದಲ್ಲಿ ನಡೆದ ರಾಸಾಯನಿಕ ಮಿಶ್ರಿತ ಹಾಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಚೀನಾದಲ್ಲಿ 27ಮಂದಿಯನ್ನು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಕಳಪೆ ಹಾಲಿನ ಪುಡಿ ಹಗರಣವು ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಈ ರಾಸಾಯನಿಕ ಮಿಶ್ರಿತ ಹಾಲು ಸೇವನೆಯಿಂದ 53ಸಾವಿರ ಮಕ್ಕಳು ಅಸ್ವಸ್ಥಗೊಂಡಿದ್ದರು. ಇದು ದೇಶದಲ್ಲಿ ಆಹಾರ ಸುರಕ್ಷತೆಯ ಬಗ್ಗೆ ಜನರಲ್ಲಿ ಆತಂಕ ಮೂಡಿಸಿದ್ದಲ್ಲದೆ, ಚೀನಾದ ಕುರಿತು ವಿದೇಶಗಳಲ್ಲಿಯೂ ತಪ್ಪು ಗ್ರಹಿಕೆಗೆ ಕಾರಣವಾಗಿತ್ತು.

ಪೊಲೀಸರು ಸಾನ್ಲು ಗ್ರೂಪ್ ಕಂಪೆನಿಯ ವಿರುದ್ಧ ಈ ಹಗರಣದ ಕುರಿತು ತೀವ್ರ ತನಿಖೆ ನಡೆಸುತ್ತಿದ್ದು,ಪ್ರಕರಣದ ಕುರಿತು 27ಮಂದಿಯನ್ನು ಬಂಧಿಸಿದ್ದಾರೆ.

ಆದರೆ ಹಾಲು ಹಗರಣದ ಪ್ರಕರಣದಲ್ಲಿ 22ಮಂದಿಯನ್ನು ಬಂಧಿಸಿರುವುದಾಗಿ ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ತಿಳಿಸಿದ್ದು,ಬಂಧಿತರೆಲ್ಲರೂ ಮಿಶ್ರಣಯುಕ್ತ ಹಾಲನ್ನು ಮಾರಾಟ ಮಾಡುವ ಜಾಲವನ್ನು ಹೊಂದಿರುವುದಾಗಿ ವರದಿಯಲ್ಲಿ ಹೇಳಿದೆ.


ಮಿಶ್ರಣಯುಕ್ತ ಹಾಲನ್ನು ಸೇವಿಸಿದ ಪರಿಣಾಮ ಕಳೆದ ಎರಡು ವಾರಗಳಲ್ಲಿ ಎರಡು ಮತ್ತು ಅದಕ್ಕಿಂತಲೂ ಕೆಳವಯಸ್ಸಿನ 12,892 ಮಕ್ಕಳಲ್ಲಿ ಶೇ.80ರಷ್ಟು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದರು.

ಚೀನಾ ಹಾಲು ಉತ್ಪನ್ನ ಉತ್ಪಾದಕಾ ಸಂಸ್ಥೆಯೊಂದರ ಹಾಲು ಸೇವನೆಯಿಂದ ಮಕ್ಕಳು ಅಸ್ವಸ್ಥಗೊಂಡಿದ್ದು, ಈ ಹಾಲಿನಲ್ಲಿ ರಾಸಾಯನಿಕ ಪದಾರ್ಥ ಮಿಶ್ರ ಮಾಡಲಾಗಿತ್ತು ಎಂದು ತನಿಖೆಯಿಂದ ಪತ್ತೆ ಹಚ್ಚಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಐಎಸ್ಐಗೆ ಹೊಸ ಮುಖ್ಯಸ್ಥ ನೇಮಕ
ಭಾರತದಲ್ಲಾಗಿದ್ದು ಕ್ರಿಶ್ಚಿಯನ್ 'ನರಮೇಧ'ವಂತೆ!
ಪರಮಾಣು ಸ್ಥಗಿತವಿಲ್ಲ: ವಿಶ್ವಸಂಸ್ಥೆಗೆ ಇರಾನ್‌‌ ತಿರುಗೇಟು
ಹಣಕಾಸು ಪ್ಯಾಕೇಜ್‌ಗೆ ಸೋಲು: ಬುಷ್‌ಗೆ ತೀವ್ರ ಹಿನ್ನಡೆ
ಫ್ಲರ್ಟ್ ಪುರಾಣ-ಜರ್ದಾರಿ ವಿರುದ್ಧ ಫತ್ವಾ
ಭಯೋತ್ಪಾದನೆ: ಜರ್ದಾರಿ ನಿಲುವಿಗೆ ಕರ್ಜಾಯ್ ಬೆಂಬಲ