ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತ-ಫ್ರಾನ್ಸ್ ನಾಗರಿಕ ಅಣು ಒಪ್ಪಂದಕ್ಕೆ ಅಂಕಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಫ್ರಾನ್ಸ್ ನಾಗರಿಕ ಅಣು ಒಪ್ಪಂದಕ್ಕೆ ಅಂಕಿತ
ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಮಂಗಳವಾರ ಸಹಿ ಹಾಕಿದ್ದು, ರಿಯಾಕ್ಟರ್‌ಗಳು ಮತ್ತು ಅಣು ಇಂಧನ ಪೂರೈಕೆಯ ನಿಟ್ಟಿನಲ್ಲಿ ಕಳೆದ 34 ವರ್ಷಗಳಿಂದ ಭಾರತ ಎದುರಿಸುತ್ತಿದ್ದ ಅಸ್ಪೃಶ್ಯತೆ ಕೊನೆಗೊಂಡಂತಾಗಿದೆ.

ಯೂರೋಪ್ ಪ್ರವಾಸದಲ್ಲಿರುವ ಭಾರತೀಯ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಫ್ರೆಂಚ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಮಧ್ಯೆ ಒಪ್ಪಂದವೇರ್ಪಟ್ಟಿದ್ದು, ಮೂಲ ಮತ್ತು ಅನ್ವಯಿಕ ಸಂಶೋಧನೆಯಿಂದ ಹಿಡಿದು ಪರಿಪೂರ್ಣ ನಾಗರಿಕ ಪರಮಾಣು ಸಹಕಾರವು ಇದರಲ್ಲಿ ಸೇರಿದೆ. ರಿಯಾಕ್ಟರುಗಳು ಮತ್ತು ಇಂಧನ ಪೂರೈಕೆ, ಪರಮಾಣು ಸುರಕ್ಷತೆ, ವಿಕಿರಣ ಮತ್ತು ಪರಿಸರ ರಕ್ಷಣೆ ಹಾಗೂ ಪರಮಾಣು ಇಂಧನ ಸರಣಿ ನಿರ್ವಹಣೆಯು ಈ ಒಪ್ಪಂದದಲ್ಲಿ ಒಳಗೊಂಡಿದೆ.

ಭಾರತವು ಪರಮಾಣು ಇಂಧನ ಪೂರೈಕೆ ರಾಷ್ಟ್ರಗಳ (ಎನ್ಎಸ್‌ಜಿ) ರಿಯಾಯಿತಿ ಪಡೆದುಕೊಂಡ ಬಳಿಕ ಮೂರು ವಾರಗಳಲ್ಲಿ ಈ ಅಣು ಒಪ್ಪಂದವೇರ್ಪಟ್ಟಿದೆ.

ಈ ಒಪ್ಪಂದವಲ್ಲದೆ, ಪ್ರಧಾನಿಯವರು ಉಭಯ ರಾಷ್ಟ್ರಗಳ ಮಧ್ಯೆ ಮತ್ತೊಂದು ಮಹತ್ವದ ಒಪ್ಪಂದಕ್ಕೂ ಸಹಿ ಹಾಕಿದರು. ಎರಡೂ ದೇಶಗಳಲ್ಲಿ ಕಿರು ಅವಧಿಗೆ (ಸುಮಾರು ಐದು ವರ್ಷಗಳವರೆಗೆ) ವಾಸಿಸುತ್ತಿರುವ ಉಭಯ ರಾಷ್ಟ್ರೀಯರಿಗೆ ಅನುಕೂಲವಾಗುವ ಸಾಮಾಜಿಕ ಭದ್ರತೆ ಒದಗಿಸುವ ಒಪ್ಪಂದ ಇದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಾಂಗ್ಲಾ: ಹಸೀನಾ ಜಾಮೀನು ಅರ್ಜಿ ವಜಾ
ಚೀನಾ ಕ್ಷೀರ ಹಗರಣ: 27 ಮಂದಿ ಸೆರೆ
ಪಾಕ್ ಐಎಸ್ಐಗೆ ಹೊಸ ಮುಖ್ಯಸ್ಥ ನೇಮಕ
ಭಾರತದಲ್ಲಾಗಿದ್ದು ಕ್ರಿಶ್ಚಿಯನ್ 'ನರಮೇಧ'ವಂತೆ!
ಪರಮಾಣು ಸ್ಥಗಿತವಿಲ್ಲ: ವಿಶ್ವಸಂಸ್ಥೆಗೆ ಇರಾನ್‌‌ ತಿರುಗೇಟು
ಹಣಕಾಸು ಪ್ಯಾಕೇಜ್‌ಗೆ ಸೋಲು: ಬುಷ್‌ಗೆ ತೀವ್ರ ಹಿನ್ನಡೆ