ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಕ್ಷಿಪಣಿ ದಾಳಿ:5 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಕ್ಷಿಪಣಿ ದಾಳಿ:5 ಸಾವು
ಪಾಕಿಸ್ತಾನದ ಉತ್ತರ ವಜರಿಸ್ತಾನದ ಬುಡಗಟ್ಟು ಪ್ರದೇಶದಲ್ಲಿ ಉಂಟಾದ ಕ್ಷಿಪಣಿ ದಾಳಿಯಲ್ಲಿ ವಿದೇಶಿ ಉಗ್ರರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಮಿರ್ ಅಲಿ ನಗರದ ಸಮೀಪವಿರುವ ಕುಶಾಲಿ ತೋರಿಕೇಲ್‌ನ ಮನೆಯೊಂದರ ಮೇಲೆ ಎರಡು ಕ್ಷಿಪಣಿ ದಾಳಿ ನಡೆದಿದ್ದು, ಮೃತಪಟ್ಟವರಲ್ಲಿ ಇಬ್ಬರು ವಿದೇಶಿ ಉಗ್ರರು ಎಂದು ವರದಿಗಳು ತಿಳಿಸಿವೆ.

ಮನೆಯಲ್ಲಿದ್ದ ಕೆಲವು ಮಂದಿ ಹಾರಾಡುತ್ತಿದ್ದ ಅನಾಮಿಕ ವಿಮಾನವೊಂದರ ಮೇಲೆ ಗುಂಡುಹಾರಿಸಿದ ನಂತರ, ಅಫಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಪಡೆಗಳು ಈ ದಾಳಿಯನ್ನು ನಡೆಸಿರುವುದಾಗಿ ಶಂಕಿಸಲಾಗಿದೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಕೈಬರ್ ಏಜೆನ್ಸಿ ಸಮೀಪದ ಮಾರುಕಟ್ಟೆಯಲ್ಲಿ ಉಂಟಾದ ಬಾಂಬ್ ಸ್ಫೋಟದಲ್ಲಿ ಎರಡು ಮಂದಿ ಸಾವನ್ನಪ್ಪಿದ್ದಾರೆ.

ಈದ್ ಉಲ್ ಫಿತರ್ ಹಬ್ಬದ ಮುಂದಾಗಿ ಪಾಕಿಸ್ತಾನ ಸರಕಾರವು ದೇಶದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಿದ್ದು, ಭಯೋತ್ಪಾದನಾ ದಾಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜಧಾನಿ ಮತ್ತು ಇತರ ನಗರಗಳಲ್ಲಿ ಸಾವಿರಾರು ಪೊಲೀಸ್, ಅರೆಸೇನಾ ಮತ್ತು ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ತಾಲಿಬಾನ್ ಮುಖ್ಯಸ್ಥ ಮೆಹ್ಸೂದ್ ಸಾವು
ಭಾರತ-ಫ್ರಾನ್ಸ್ ನಾಗರಿಕ ಅಣು ಒಪ್ಪಂದಕ್ಕೆ ಅಂಕಿತ
ಬಾಂಗ್ಲಾ: ಹಸೀನಾ ಜಾಮೀನು ಅರ್ಜಿ ವಜಾ
ಚೀನಾ ಕ್ಷೀರ ಹಗರಣ: 27 ಮಂದಿ ಸೆರೆ
ಪಾಕ್ ಐಎಸ್ಐಗೆ ಹೊಸ ಮುಖ್ಯಸ್ಥ ನೇಮಕ
ಭಾರತದಲ್ಲಾಗಿದ್ದು ಕ್ರಿಶ್ಚಿಯನ್ 'ನರಮೇಧ'ವಂತೆ!