ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮೆಹ್ಸೂದ್ ಸತ್ತಿಲ್ಲ-ತಾಲಿಬಾನ್ ವಕ್ತಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೆಹ್ಸೂದ್ ಸತ್ತಿಲ್ಲ-ತಾಲಿಬಾನ್ ವಕ್ತಾರ
ಪಾಕಿಸ್ತಾನಿ ತಾಲಿಬಾನ್ ನಾಯಕ ಬೈತುಲ್ಲಾ ಮೆಹ್ಸೂದ್ ಅಸೌಖ್ಯದಿಂದ ಮೃತಪಟ್ಟಿದ್ದಾರೆ ಎಂಬ ವರದಿಗಳನ್ನು ತಾಲಿಬಾನ್ ವಕ್ತಾರರು ತಳ್ಳಿಹಾಕಿದ್ದಾರೆ.

ಪಾಕಿಸ್ತಾನ ಪ್ರಾಧಿಕಾರದ ಉಗ್ರಗಾಮಿ ಕಮಾಂಡರ್ ಆಗಿರುವ ಮೆಹ್ಸೂದ್, ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಸೇರಿದಂತೆ ದೇಶದಲ್ಲಿನ ಅನೇಕ ಆತ್ಮಹತ್ಯಾ ಬಾಂಬ್ ದಾಳಿಗಳ ರೂವಾರಿ ಎಂದು ಶಂಕಿಸಲಾಗಿದೆ.

ಏನೇ ಆದರೂ, ರಾವಲ್ಪಿಂಡಿಯಲ್ಲಿ ಡಿಸೆಂಬರ್ 27ರಂದು ಚುನಾವಣಾ ರ‌್ಯಾಲಿಯ ವೇಳೆ ನಡೆದ ಈ ದಾಳಿಯಲ್ಲಿನ ತನ್ನ ಕೈವಾಡವನ್ನು ಮೆಹ್ಸೂದ್ ತಳ್ಳಿಹಾಕಿದ್ದರು.

ದೀರ್ಘಾವಧಿಯ ಅಸೌಖ್ಯದಿಂದ ಮತ್ತು ಕಿಡ್ನಿ ವೈಫಲ್ಯದಿಂದ ಮೆಹ್ಸೂದ್ ಅಫ್ಗಾನ್ ಗಡಿಭಾಗದಲ್ಲಿರುವ ವಜರಿಸ್ತಾನದಲ್ಲಿ ಮೃತಪಟ್ಟಿರುವುದಾಗಿ ಜಿಯೋ ಟಿವಿ ಮಂಗಳವಾರ ವರದಿ ಮಾಡಿತ್ತು.

ಆದರೆ, ಮೆಹ್ಸೂದ್ ಮೃತಪಟ್ಟಿರುವ ಮತ್ತು ಮೆಹ್ಸೂದ್ ಗಂಭೀರ ಸ್ಥಿತಿಯಲ್ಲಿರುವ ವರದಿಗಳನ್ನು ತಾಲಿಬಾನ್ ವಕ್ತಾರರು ತಳ್ಳಿಹಾಕಿದ್ದಾರೆ.

ಬೈತುಲ್ಲಾ ಮೆಹ್ಸೂದ್‌ನ ಸಮೀಪವರ್ತಿಯ ಬಳಿ ನಾನು ಮಾತನಾಡಿದ್ದು, ಆದರೆ, ಅಂತಹ ಯಾವುದೇ ವಿಚಾರ ನನಗೆ ತಿಳಿದುಬಂದಿಲ್ಲ ಎಂದು ವಾಯುವ್ಯ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿನ ಉಗ್ರಗಾಮಿ ವಕ್ತಾರ ಮುಸ್ಲಿಂ ಖಾನ್ ಹೇಳಿದ್ದಾರೆ.

ಮೆಹ್ಸೂದ್ ಡಯಾಬಿಟೀಸ್ ತೊಂದರೆಯಿಂದ ಬಳಲುತ್ತಿದ್ದರು ಎಂಬ ವರದಿಗಳನ್ನೂ ತಳ್ಳಿಹಾಕಿರುವ ತಾಲಿಬಾನ್ ವಕ್ತಾರರು, ನಮ್ಮ ನಾಯಕರು ಆರೋಗ್ಯವಾಗಿದ್ದಾರೆ. ಅವರಿಗೆ ಅಂತಹ ಯಾವುದೇ ಕಾಯಿಲೆ ಬಂದಿಲ್ಲ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಕ್ಷಿಪಣಿ ದಾಳಿ:5 ಸಾವು
ಪಾಕ್ ತಾಲಿಬಾನ್ ಮುಖ್ಯಸ್ಥ ಮೆಹ್ಸೂದ್ ಸಾವು
ಭಾರತ-ಫ್ರಾನ್ಸ್ ನಾಗರಿಕ ಅಣು ಒಪ್ಪಂದಕ್ಕೆ ಅಂಕಿತ
ಬಾಂಗ್ಲಾ: ಹಸೀನಾ ಜಾಮೀನು ಅರ್ಜಿ ವಜಾ
ಚೀನಾ ಕ್ಷೀರ ಹಗರಣ: 27 ಮಂದಿ ಸೆರೆ
ಪಾಕ್ ಐಎಸ್ಐಗೆ ಹೊಸ ಮುಖ್ಯಸ್ಥ ನೇಮಕ