ನೇಪಾಳದಲ್ಲಿನ ಪ್ರಚಂಡ ನೇತೃತ್ವದ ಮಾವೋವಾದಿ ಸರಕಾರವು ದೀರ್ಘಕಾಲ ಆಳ್ವಿಕೆ ನಡೆಸುವುದಿಲ್ಲ ಎಂದು ಭವಿಷ್ಯ ನುಡಿದಿರುವ ನೇಪಾಳ ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲಾ, ತನ್ನ ನೇಪಾಳಿ ಕಾಂಗ್ರೆಸ್ ಪಕ್ಷವು ಮಾವೋವಾದಿ ಪಕ್ಷದೊಂದಿಗೆ ಕೈಜೋಡಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಮಾವೋವಾದಿ ನೇತೃತ್ವದ ಸರಕಾರದೊಂದಿಗೆ ನೇಪಾಳಿ ಕಾಂಗ್ರೆಸ್ ಕೈಜೋಡಿಸುವುದಿಲ್ಲ ಎಂದು ಕೊಯಿರಾಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಏನೇ ಆದರೂ, ಶಾಸಕಾಂಗ ಸಭೆಯ ಪ್ರಮುಖ ಕಾರ್ಯಕ್ರಮವಾದ ಸಂವಿಧಾನ ಕರಡಿನಲ್ಲಿ ನೇಪಾಳಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೊಯಿರಾಲಾ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಸರಕಾರವನ್ನು ಉರುಳಿಸಲು ಕೊಯಿರಾಲಾ ಸಂಚು ಹೂಡುತ್ತಿದ್ದಾರೆಂಬ ಕೆಲವು ಮಾವೋವಾದಿ ನಾಯಕರ ಆರೋಪವನ್ನು ತಳ್ಳಿಹಾಕಿದ ಅವರು, ಮಾವೋ ಸರಕಾರವು ತಾನಾಗಿಯೇ ಉರುಳುತ್ತದೆ ಅದಕ್ಕಾಗಿ ಯಾವುದೇ ಸಂಚು ಹೂಡಬೇಕಾಗಿಲ್ಲ ಎಂದಿದ್ದಾರೆ. |
|