ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತದೊಂದಿಗೆ ಸಂಬಂಧ ಮತ್ತಷ್ಟು ಸದೃಢ:ರೈಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದೊಂದಿಗೆ ಸಂಬಂಧ ಮತ್ತಷ್ಟು ಸದೃಢ:ರೈಸ್
PTI
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಭದ್ರವಾಗಿದೆ ಎಂದು ಪುನರುಚ್ಚರಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್, ಐತಿಹಾಸಿಕ ಅಣು ಒಪ್ಪಂದವು ಭಾರತದೊಂದಿಗಿನ ಮೈತ್ರಿಯನ್ನು ಇನ್ನಷ್ಟು ಸದೃಢಗೊಳಿಸುವ ವಿಸ್ತೃತ ಚೌಕಟ್ಟಾಗಿದೆ ಎಂದು ಹೇಳಿದ್ದಾರೆ.

ಇದು ನಿಜಕ್ಕೂ ಐತಿಹಾಸಿಕ ಒಪ್ಪಂದವೇ ಆಗಿದೆ. ಭಾರತ ಮತ್ತು ಅಮೆರಿಕ ನಡುವಿನ ಮೈತ್ರಿ ವರ್ಧನೆಯ ಪ್ರಯತ್ನಕ್ಕೆ ಇದು ಇನ್ನಷ್ಟು ಪುಷ್ಟಿ ನೀಡಿದೆ ಎಂದು ಕಾಂಗ್ರೆಸ್ ಒಪ್ಪಂದ ಅನುಮೋದನೆಗೆ ಕಾರಣರಾದವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ವಿದೇಶಾಂಗ ಇಲಾಖೆಯಿಂದ ಏರ್ಪಡಿಸಲಾದ ಡಿನ್ನರ್ ಕೂಟದಲ್ಲಿ ರೈಸ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಡೋಲೀಸಾ ರೈಸ್ ಶನಿವಾರ ಭಾರತಕ್ಕೆ ಭೇಟಿ ನೀಡುವ ಸಂಭವವಿದ್ದು, ಈ ಸಂದರ್ಭದಲ್ಲಿ ಐತಿಹಾಸಿಕ ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ಮೈತ್ರಿಯು ಭದ್ರವಾಗಿದ್ದು, ಇದು ದೇಶದಪ್ರಜಾಪ್ರಭುತ್ವಕ್ಕೆ ಉತ್ತಮವಾಗಿದೆ ಮತ್ತು ವಿಶ್ವಕ್ಕೂ ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಉನ್ನತ ಅಧಿಕಾರಿಗಳು ಇದೇ ವೇಳೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಾಯುವ್ಯ ಪಾಕ್‌ನಲ್ಲಿ ಬಾಂಬ್ ದಾಳಿ:4 ಸಾವು
ಅಣುಬಂಧಕ್ಕೆ ಯುಎಸ್ ಸೆನೆಟ್‌ ಅಮುಮೋದನೆ
ಅಲ್‌ಖೈದಾದಿಂದ ಅಮೆರಿಕಕ್ಕೆ ತೀವ್ರ ಅಪಾಯ:ಸಿಐಎ
ಪ್ರಚಂಡ ಸರ್ಕಾರಕ್ಕೆ ದೀರ್ಘ ಭವಿಷ್ಯವಿಲ್ಲ: ಕೊಯಿರಾಲಾ
ಮೆಹ್ಸೂದ್ ಸತ್ತಿಲ್ಲ-ತಾಲಿಬಾನ್ ವಕ್ತಾರ
ಪಾಕ್ ಕ್ಷಿಪಣಿ ದಾಳಿ:5 ಸಾವು