ಭಾರತದೊಂದಿಗಿನ ಪರಮಾಣು ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಗ್ರೀನ್ ಸಿಗ್ನಲ್ ನೀಡಿರುವುದರೊಂದಿಗೆ, ತನ್ನ ಮೈತ್ರಿ ರಾಷ್ಟ್ರವಾಗಿರುವ ಚೀನಾದೊಂದಿಗೆ ಸಮಾನ ಒಪ್ಪಂದವನ್ನು ಪಾಕಿಸ್ತಾನವು ನಡೆಸಲಿದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಯೂಸುಫ್ ರಾಜಾ ಗಿಲಾನಿ ಸೂಚಿಸಿದ್ದಾರೆ.ನಾಗರಿಕ ಪರಮಾಣು ಒಪ್ಪಂದ ಜಾರಿಗೆ ಪಾಕಿಸ್ತಾನವು ಪ್ರಯತ್ನಿಸಲಿದ್ದು, ವಿಶ್ವ ಸಮುದಾಯಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಗಿಲಾನಿ, ಭಾರತ ಅಮೆರಿಕ ಅಣು ಒಪ್ಪಂದ ಅನುಮೋದನೆಯ ವರದಿ ಬಂದ ಬೆನ್ನಲ್ಲೇ ತಿಳಿಸಿದರು.ಭಾರತದೊಂದಿಗಿನ ಪರಮಾಣು ಒಪ್ಪಂದವವು ಅಂತಿಮಗೊಂಡಿದ್ದು, ಇದೇ ರೀತಿಯ ಒಪ್ಪಂದವನ್ನು ನಡೆಸುವ ಹಕ್ಕು ಪಾಕಿಸ್ತಾನಕ್ಕಿದೆ. ಪಾಕಿಸ್ತಾನವು ಈ ವಿಚಾರದಲ್ಲಿ ತಾರತಮ್ಯವನ್ನು ಬಯಸುವುದಿಲ್ಲ ಎಂದು ಗಿಲಾನಿ ಸ್ಪಷ್ಟಪಡಿಸಿದ್ದಾರೆ.ಪಾಕಿಸ್ತಾನ ಮತ್ತು ಚೀನಾವು ವಿಶಿಷ್ಟ ಮೈತ್ರಿಯನ್ನು ಹೊಂದಿದ್ದು, ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರೊಂದಿಗೆ, ಸದ್ಯದಲ್ಲಿಯೇ ಚೀನಾಗೆ ತೆರಳಲಿದ್ದೇನೆ. ಚೀನಾದೊಂದಿಗಿನ ಪಾಕಿಸ್ತಾನದ ಸಹಕಾರವು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಪಾಕಿಸ್ತಾನ ಮತ್ತು ಚೀನಾ ನಡುವಿನ ಸಹಕಾರವು ಬಹುಕ್ಷೇತ್ರವಾಗಿದೆ. ಇದು ಕೇವಲ ಸರಕಾರಿ ಮೈತ್ರಿಯಲ್ಲಿ ಜನರ ನಡುವಿನ ಮೈತ್ರಿಯಾಗಿದೆ ಎಂದು ಗಿಲಾನಿ ಅಭಿಪ್ರಾಯಪಟ್ಟಿದ್ದಾರೆ. |
ಸಂಬಂಧಿತ ಮಾಹಿತಿ ಹುಡುಕಿ |
|