ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಸಚಿವರಿಂದ ಸರಬ್‌ಜಿತ್ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಸಚಿವರಿಂದ ಸರಬ್‌ಜಿತ್ ಭೇಟಿ
ದಶಕಗಳಿಗಿಂತಲೂ ಹೆಚ್ಚು ಕಾಲ ಲಾಹೋರ್‌ನ ಕೋಟ್ಲಾಕ್‌ಪಟ್ ಜೈಲಿನಲ್ಲಿ ಬಂಧಿತನಾಗಿರುವ ಭಾರತದ ಪ್ರಜೆ ಸರಬ್‌‌ಜಿತ್ ಸಿಂಗ್ ಅವರನ್ನು ಪಾಕಿಸ್ತಾನ ಕಾನೂನು ಮತ್ತು ಮಾನವ ಹಕ್ಕುಗಳ ಸಚಿವ ಫಾರೂಕ್ ಎಚ್.ನೀಕ್ ಭೇಟಿ ಮಾಡಲಿದ್ದಾರೆ.

ಈ ಭೇಟಿಯು, 1990ರಲ್ಲಿ ಅನೇಕ ಜನರ ಸಾವಿಗೆ ಕಾರಣವಾದ ಲಾಹೋರ್ ಸ್ಫೋಟದ ಆರೋಪದಲ್ಲಿ ಬಂಧಿತನಾಗಿರುವ ಸರಭ್‌ಜಿತ್ ಸಿಂಗ್‌ನ ಕ್ಷಪಾಪಣ ಪ್ರಕರಣದ ವಿಮರ್ಶೆ ಮಾಡುವ ಪ್ರಯತ್ನವಾಗಿದೆ.

ಈಗಾಗಲೇ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮತ್ತು ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸರಬ್‌ಜಿತ್‌ನ ಈ ಕ್ಷಮಾಪಣೆ ಮನವಿಯನ್ನು ತಿರಸ್ಕರಿಸಿದ್ದಾರೆ.

ಸರಬ್‌ಜಿತ್ ಪ್ರಕರಣವು ಪ್ರಮಾದಿಂದ ಉಂಟಾಗಿದೆ ಎಂದು ಭಾರತ ಸರಕಾರವು ಪ್ರಮಾಣಸಹಿತ ಸಾಕ್ಷಿಯನ್ನು ನೀಡಿದ್ದರೂ, ಸರಬ್‌ಜಿತ್ ಸಹೋದರಿ, ಪತ್ನಿ ಮತ್ತು ಮಗಳು ಸೇರಿದಂತೆ ಸರಬ್‌ಜಿತ್ ಕುಟುಂಬದ ಸದಸ್ಯರು ಸರಬ್‌ಜಿತ್ ಕ್ಷಮಾಪಣೆಗೆ ಪಾಕಿಸ್ತಾನ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದರು.

ಕುಡಿದ ಸ್ಥಿತಿಯಲ್ಲಿದ್ದ ಸರಬ್‌ಜಿತ್ ಅಚಾನಕ್ ಆಗಿ ಪಾಕಿಸ್ತಾನ ಪ್ರದೇಶದೊಳಗೆ ಕಾಲಿಟ್ಟಿದ್ದರು ಎಂಬುದಾಗಿ ಸರಬ್‌ಜಿತ್ ಕುಟುಂಬ ಸದಸ್ಯರು ವಾದಿಸುತ್ತಾರೆ. ಆದರೆ, ಗೂಢಾಚಾರದ ಆರೋಪದಲ್ಲಿ ಪಾಕಿಸ್ತಾನ ಪ್ರಾಧಿಕಾರವು ಸರಬ್‌ಜಿತ್‌ನನ್ನು ಬಂಧಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕಿಸ್ತಾನಕ್ಕೂ ಅಣು ಒಪ್ಪಂದ ನಡೆಸುವ ಹಕ್ಕಿದೆ:ಗಿಲಾನಿ
ಭಾರತದೊಂದಿಗೆ ಸಂಬಂಧ ಮತ್ತಷ್ಟು ಸದೃಢ:ರೈಸ್
ವಾಯುವ್ಯ ಪಾಕ್‌ನಲ್ಲಿ ಬಾಂಬ್ ದಾಳಿ:4 ಸಾವು
ಅಣುಬಂಧಕ್ಕೆ ಯುಎಸ್ ಸೆನೆಟ್‌ ಅಮುಮೋದನೆ
ಅಲ್‌ಖೈದಾದಿಂದ ಅಮೆರಿಕಕ್ಕೆ ತೀವ್ರ ಅಪಾಯ:ಸಿಐಎ
ಪ್ರಚಂಡ ಸರ್ಕಾರಕ್ಕೆ ದೀರ್ಘ ಭವಿಷ್ಯವಿಲ್ಲ: ಕೊಯಿರಾಲಾ