ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಯೋತ್ಪಾದನೆ ಮುಕ್ತ ರಾಷ್ಟ್ರವಾಗುವವರೆಗೆ ಹೋರಾಟ:ಪಾಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆ ಮುಕ್ತ ರಾಷ್ಟ್ರವಾಗುವವರೆಗೆ ಹೋರಾಟ:ಪಾಕ್
PTI
ಪಾಕಿಸ್ತಾನವು ಭಯೋತ್ಪಾದನಾ ಮುಕ್ತ ರಾಷ್ಟ್ರವಾಗಿ ಹೊರಹೊಮ್ಮುವವರೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ವಿರುದ್ಧ ಕದನವು ಮುಂದುವರಿಯಲಿದೆ ಎಂದು ಪಾಕಿಸ್ತಾನ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಮತ್ತು ಅಫಘಾನಿಸ್ತಾನದಲ್ಲಿ ಭಯೋತ್ಪಾದನಾ ದಾಳಿಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಾರಣವಾದ ಉಗ್ರರನ್ನು ಸದೆಬಡಿಯುವಂತೆ ಪಾಕಿಸ್ತಾನಕ್ಕೆ ಅಮೆರಿಕವು ಒತ್ತಡ ಹೇರುತ್ತಿದೆ.

ಜುಲೈ 2007ರಿಂದ ಪಾಕಿಸ್ತಾನದಲ್ಲಿ ಉಂಟಾದ ಆತ್ಮಹತ್ಯಾ ಬಾಂಬ್ ದಾಳಿಗಳಲ್ಲಿ ಸುಮಾರು 1,200 ಮಂದಿ ಮೃತಪಟ್ಟಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ ಸೇನಾ ಅಂಕಿಅಂಶಗಳು ತಿಳಿಸಿವೆ.

ಹಿಂದಿನ ಸರಕಾರದ ಆಡಳಿತದ ಅವಧಿಯಲ್ಲಿ, ಪಾಕಿಸ್ತಾನ ಬುಡಗಟ್ಟು ಪ್ರದೇಶ ಮತ್ತು ಅಫಘಾನಿಸ್ತಾನ ಗಡಿ ಪ್ರದೇಶಗಳಲ್ಲಿ ಉಗ್ರಗಾಮಿಗಳ ವಿರುದ್ಧದ ದಾಳಿಯನ್ನು ಸ್ವಲ್ಪಸಮಯದಲ್ಲೇ ಸ್ಥಗಿತಗೊಳಿಸಿತ್ತು.

ಆದರೆ, ಫೆಬ್ರವರಿ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಪ್ರಸಕ್ತ ಸರಕಾರವು, ಉಗ್ರಗಾಮಿಗಳು ನಾಶವಾಗುವವರೆಗೆ ಅಥವಾ ಪಾಕಿಸ್ತಾನದಿಂದ ಹೊರಹೋಗುವವರೆಗೆ ಭಯೋತ್ಪಾದನೆ ವಿರುದ್ಧದ ದಾಳಿಯನ್ನು ಮುಂದುವರಿಸಲಿದೆ ಎಂದು ಆಂತರಿಕ ಸಚಿವ ರೆಹಮಾನ್ ಮಾಲಿಕ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಸಚಿವರಿಂದ ಸರಬ್‌ಜಿತ್ ಭೇಟಿ
ಪಾಕಿಸ್ತಾನಕ್ಕೂ ಅಣು ಒಪ್ಪಂದ ನಡೆಸುವ ಹಕ್ಕಿದೆ:ಗಿಲಾನಿ
ಭಾರತದೊಂದಿಗೆ ಸಂಬಂಧ ಮತ್ತಷ್ಟು ಸದೃಢ:ರೈಸ್
ವಾಯುವ್ಯ ಪಾಕ್‌ನಲ್ಲಿ ಬಾಂಬ್ ದಾಳಿ:4 ಸಾವು
ಅಣುಬಂಧಕ್ಕೆ ಯುಎಸ್ ಸೆನೆಟ್‌ ಅಮುಮೋದನೆ
ಅಲ್‌ಖೈದಾದಿಂದ ಅಮೆರಿಕಕ್ಕೆ ತೀವ್ರ ಅಪಾಯ:ಸಿಐಎ