ವಾಯುವ್ಯ ಗಡಿಪ್ರಾಂತ್ಯದ ಬುಡಗಟ್ಟು ಪ್ರದೇಶದಲ್ಲಿ ವಾಸಿಸುತ್ತಿರುವ ಅಫ್ಘಾನ್ ನಿರಾಶ್ರಿತರಿಗೆ ಮೂರು ದಿನದೊಳಗೆ ಪ್ರದೇಶದಿಂದ ಹೊರಹೋಗುವಂತೆ ಪಾಕಿಸ್ತಾನವು ಸೂಚನೆ ನೀಡಿದೆ.
ಅಫಘಾನಿಸ್ತಾನ ಗಡಿ ಭಾಗದಲ್ಲಿರುವ ಬಿಜಾಜುರ್ ಪ್ರದೇಶದಿಂದ ತೆರಳುವಂತೆ ನಿರಾಶ್ರಿತರಿಗೆ ಆದೇಶ ನೀಡಲಾಗಿದ್ದು, ಆದರೆ ಈ ಆದೇಶಕ್ಕೆ ಕಾರಣಗಳನ್ನು ಪ್ರಾಧಿಕಾರವು ನೀಡಿಲ್ಲ ಎಂದು ಸುದ್ದಿಸಂಸ್ಥೆಗಳು ಶುಕ್ರವಾರ ವರದಿ ಮಾಡಿವೆ.
ಬಿಜಾಜುರ್‌ನಲ್ಲಿ ರಕ್ಷಣಾ ಪಡೆಗಳು ಉಗ್ರಗಾಮಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದು, ಅಫ್ಘಾನ್ ನಿರಾಶ್ರಿತರು ಈ ಪ್ರದೇಶದಲ್ಲಿ ಉಗ್ರರಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದಾಗಿ ಪಾಕ್ ಪ್ರಾಧಿಕಾರವು ಶಂಕಿಸಿದೆ ಎಂದು ವರದಿಗಳು ತಿಳಿಸಿವೆ.
ಈಗಾಗಲೇ ಬಿಜಾಜುರ್ ಜಿಲ್ಲೆಯ ನಿರಾಶ್ರಿತರ ಶಿಬಿರವನ್ನು ಪಾಕಿಸ್ತಾನವು ಮುಚ್ಚಿದ್ದು, ಸಾವಿರಾರು ಅಫ್ಘಾನ್ ನಿರಾಶ್ರಿತರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. |