ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತ ಭೇಟಿ ವೇಳೆ ಅಣುಬಂಧಕ್ಕೆ ಸಹಿ ಅಸಾಧ್ಯ:ರೈಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಭೇಟಿ ವೇಳೆ ಅಣುಬಂಧಕ್ಕೆ ಸಹಿ ಅಸಾಧ್ಯ:ರೈಸ್
PTI
ತನ್ನ ಭಾರತ ಭೇಟಿಯ ವೇಳೆ ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಶೀಘ್ರವೇ ಸಹಿ ಬೀಳುವುದು ಅಸಂಭವ ಎಂದು ಸೂಚನೆ ನೀಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್, ಒಪ್ಪಂದಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕವಾಗಿ ಇನ್ನೂ ಅನೇಕ ಹಂತದ ಕಾರ್ಯಗಳು ನಡೆಯಲು ಬಾಕಿ ಇದ್ದು,ಅವುಗಳೆಲ್ಲ ಪೂರ್ಣಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಶನಿವಾರ(ಇಂದು) ನವದೆಹಲಿಗೆ ಆಗಮಿಸಲಿರುವ ಕಾಂಡೋಲೀಸಾ ರೈಸ್, ಪರಮಾಣು ಪರೀಕ್ಷೆ ವಿಚಾರದಲ್ಲಿ ಹೈಡ್ ಕಾಯಿದೆಯನ್ನು ಅಮೆರಿಕವು ಪರಿಗಣಿಸುತ್ತದೆ ಎಂಬುದಾಗಿ ಪುನರುಚ್ಛರಿಸಿದ್ದಾರೆ.

ಎರಡು ದಿನಗಳ ಹಿಂದೆ ಅಮೆರಿಕ ಕಾಂಗ್ರೆಸ್‌ನಿಂದ ಅನುಮೋದಿಸಲ್ಪಟ್ಟ ಒಪ್ಪಂದದ ಕುರಿತಂತೆ ಅನೇಕ ಆಡಳಿತಾತ್ಮಕ ಕಾರ್ಯಗಳು ಬಾಕಿ ಉಳಿದಿದೆ. ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮಸೂದೆಗೆ ಸಹಿ ಹಾಕಲು ಉತ್ಸುಕರಾಗಿದ್ದು, ಈ ಕಾರ್ಯವು ಶೀಘ್ರದಲ್ಲೇ ನೆರವೇರುವ ನಿರೀಕ್ಷೆ ಇದೆ ಎಂದು ರೈಸ್ ತಿಳಿಸಿದ್ದಾರೆ.

ಅಣು ಒಪ್ಪಂದದಲ್ಲಿ ಭಾಗಿಯಾಗಿರುವ ಅಮೆರಿಕ ಭಾರತೀಯರು, ಭಾರತೀಯ ಅಮೆರಿಕನ್ ಸಮುದಾಯ, ಭಾರತ-ಅಮೆರಿಕ ಉದ್ಯಮ ಸಮುದಾಯ, ರಾಯಭಾರಿಗಳು ಮುಂತಾದವರಿಗೆ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ ಎಂದು ರೈಸ್ ಇದೇ ವೇಳೆ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಫ್ಘಾನ್‌‌ನಿಂದ ನಿರಾಶ್ರಿತರು ತೊಲಗಲು ಪಾಕ್ ತಾಕೀತು
ಭಯೋತ್ಪಾದನೆ ಮುಕ್ತ ರಾಷ್ಟ್ರವಾಗುವವರೆಗೆ ಹೋರಾಟ:ಪಾಕ್
ಪಾಕ್ ಸಚಿವರಿಂದ ಸರಬ್‌ಜಿತ್ ಭೇಟಿ
ಪಾಕಿಸ್ತಾನಕ್ಕೂ ಅಣು ಒಪ್ಪಂದ ನಡೆಸುವ ಹಕ್ಕಿದೆ:ಗಿಲಾನಿ
ಭಾರತದೊಂದಿಗೆ ಸಂಬಂಧ ಮತ್ತಷ್ಟು ಸದೃಢ:ರೈಸ್
ವಾಯುವ್ಯ ಪಾಕ್‌ನಲ್ಲಿ ಬಾಂಬ್ ದಾಳಿ:4 ಸಾವು