ಅಫಘಾನಿಸ್ತಾನ ಗಡಿ ಭಾಗದ ಸಮೀಪದಲ್ಲಿರುವ ಗ್ರಾಮವೊಂದರ ಮೇಲೆ ಶಂಕಿತ ಅಮೆರಿಕ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದಾಗಿ ಕನಿಷ್ಟ 20 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರಲ್ಲಿ ಹೆಚ್ಚಿನವರು ಉಗ್ರರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಸಾಮಾ ಬಿನ್ ಲಾಡೆನ್ ಅಡಗುತಾಣವೆಂದು ಶಂಕಿಸಲಾದ ಅಫಘಾನಿಸ್ತಾನ- ಪಾಕಿಸ್ತಾನ ಗಡಿ ವಲಯದಲ್ಲಿ ತಾಲಿಬಾನ್ ಮತ್ತು ಅಲ್‌ಖೈದಾ ಉಗ್ರರ ವಿರುದ್ಧ ಅಮೆರಿಕ ಪಡೆಗಳು ಇತ್ತೀಚೆಗೆ ಗಡಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.
ಅಮೆರಿಕ ಪಡೆಯು ಉತ್ತರ ವಜರಿಸ್ತಾನದ ಗ್ರಾಮವೊಂದರ ಮೇಲೆ ಎರಡು ಕ್ಷಿಪಣಿ ದಾಳಿಗಳನ್ನು ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ವಜರಿಸ್ತಾನದ ಮಹಮ್ಮದ್ ಖೇಲ್ ಗ್ರಾಮದಲ್ಲಿನ ಮನೆಯೊಂದರ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 20 ಶಂಕಿತ ಉಗ್ರರು ಸಾವಿಗೀಡಾಗಿರುವ ವರದಿಯಾಗಿದೆ ಎಂದು ಹಿರಿಯ ಪಾಕಿಸ್ತಾನ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. |