ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜರ್ದಾರಿಯಿಂದ ಪಾಕ್ ಭದ್ರತಾ ವ್ಯವಸ್ಥೆ ಅವಲೋಕನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜರ್ದಾರಿಯಿಂದ ಪಾಕ್ ಭದ್ರತಾ ವ್ಯವಸ್ಥೆ ಅವಲೋಕನ
PTI
ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಸೇನಾ ಮುಖ್ಯಸ್ಥ ಅಶ್ಪಕ್ ಪರ್ವೇಜ್ ಖಯಾನಿ ಅವರೊಂದಿಗೆ ದೇಶದ ಭದ್ರತಾ ಪರಿಸ್ಥಿತಿಯ ಕುರಿತಾಗಿ ಶನಿವಾರ ಅವಲೋಕನ ನಡೆಸಿದ್ದು, ಅಫಘಾನಿಸ್ತಾನ ಗಡಿ ಭಾಗದ ಬಿಜಾಜುರ್ ಬುಡಗಟ್ಟು ಪ್ರದೇಶದಲ್ಲಿ ತಾಲಿಬಾನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

ಇಸ್ಲಾಮಾಬಾದ್‌ನ ಅಧ್ಯಕ್ಷೀಯ ಭವನದಲ್ಲಿ ಖಯಾನಿ ಜರ್ದಾರಿ ಅವರನ್ನು ಶನಿವಾರ ಭೇಟಿ ಮಾಡಿದ್ದು, ದೇಶದಲ್ಲಿನ ಭದ್ರತಾ ವ್ಯವಸ್ಥೆ, ಭಯೋತ್ಪಾದನೆ ವಿರುದ್ಧದ ಕದನ ಮುಂತಾದ ವಿಚಾರಗಳ ಕುರಿತಾಗಿ ಎರಡೂ ನಾಯಕರು ಚರ್ಚೆ ನಡೆಸಿದರು ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ದೇಶದಾದ್ಯಂತ ಶಾಂತಿ ನೆಲೆಸುವವರೆಗೆ ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧದ ಕದನವನ್ನು ಮುಂದುವರಿಸಲಿದೆ ಎಂದು ಜರ್ದಾರಿ ಇದೇ ವೇಳೆ ಪುನರುಚ್ಛರಿಸಿದ್ದು, ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟುಮಾಡುವಂತಹ ಋಣಾತ್ಮಕತೆಯನ್ನು ಹರಡಿಸಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸೇನಾ ವೃತ್ತಿ ಸಾಮರ್ಥ್ಯದ ಬಗ್ಗೆಯೂ ಈ ಸಭೆಯಲ್ಲಿ ಉಭಯ ನಾಯಕರು ಚರ್ಚೆ ನಡೆಸಿದರು. ಸೇನಾ ಪಡೆಯ ಸ್ಪರ್ಧಾತ್ಮಕತೆಯನ್ನು ಇದೇ ವೇಳೆ ಶ್ಲಾಘಿಸಿದ ಜರ್ದಾರಿ, ಇದು ಕ್ಲಿಷ್ಟಕರ ಸಮಯದಲ್ಲೂ ಪರಿಸ್ಥಿತಿಯನ್ನು ದಕ್ಷತೆಯಿಂದ ಎದುರಿಸಲು ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ ಪಡೆಯಿಂದ ಕ್ಷಿಪಣಿ ದಾಳಿ:20 ಸಾವು
ಭಾರತ ಭೇಟಿ ವೇಳೆ ಅಣುಬಂಧಕ್ಕೆ ಸಹಿ ಅಸಾಧ್ಯ:ರೈಸ್
ಅಫ್ಘಾನ್‌‌ನಿಂದ ನಿರಾಶ್ರಿತರು ತೊಲಗಲು ಪಾಕ್ ತಾಕೀತು
ಭಯೋತ್ಪಾದನೆ ಮುಕ್ತ ರಾಷ್ಟ್ರವಾಗುವವರೆಗೆ ಹೋರಾಟ:ಪಾಕ್
ಪಾಕ್ ಸಚಿವರಿಂದ ಸರಬ್‌ಜಿತ್ ಭೇಟಿ
ಪಾಕಿಸ್ತಾನಕ್ಕೂ ಅಣು ಒಪ್ಪಂದ ನಡೆಸುವ ಹಕ್ಕಿದೆ:ಗಿಲಾನಿ