ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್‌ ಬುಡಕಟ್ಟು ಪ್ರದೇಶದಲ್ಲಿ ಮೆಹ್ಸೂದ್ ಪ್ರತ್ಯಕ್ಷ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ ಬುಡಕಟ್ಟು ಪ್ರದೇಶದಲ್ಲಿ ಮೆಹ್ಸೂದ್ ಪ್ರತ್ಯಕ್ಷ !
ತನ್ನ ದೀರ್ಘಾವಧಿಯ ಅನಾರೋಗ್ಯದಿಂದ ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಹ್ಸೂದ್ ಮೃತಪಟ್ಟಿರುವುವ ಅಸಮಂಜಸ ವರದಿಗಳ ನಡುವೆಯೂ, ಪಾಕಿಸ್ತಾನದ ಅಶಾಂತ ಬುಡಗಟ್ಟು ಪ್ರದೇಶದಲ್ಲಿರುವ ಕುಗ್ರಾಮವೊಂದಕ್ಕೆ ಮೆಹ್ಸೂದ್ ಆಗಮಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಫಘಾನಿಸ್ತಾನ ಗಡಿ ಭಾಗದಲ್ಲಿರುವ ದಕ್ಷಿಣ ವಜರಿಸ್ತಾನ ಬುಡಗಟ್ಟು ಪ್ರದೇಶದಲ್ಲಿರುವ ಸಾಮ್ ಗ್ರಾಮಕ್ಕೆ ಮೆಹ್ಸೂದ್ ಆಗಮಿಸಿದಾಗ, ಗ್ರಾಮಸ್ಥರು ಮೆಹ್ಸೂದ್‌ಗೆ ಭವ್ಯ ಸ್ವಾಗತವನ್ನೇ ನೀಡಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಡಯಾಬಿಟೀಸ್ ಮತ್ತು ಇತರ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದ ಮೆಹ್ಸೂದ್, ಗುರುವಾರ ನಿಧನರಾಗಿದ್ದಾರೆ ಎಂಬುದಾಗಿ ಪಾಕಿಸ್ತಾನ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಮೊದಲು ವರದಿ ಮಾಡಿದ್ದವು. ಆದರೆ, ತಾಲಿಬಾನ್ ವಕ್ತಾರ ಮೌಲಿ ಉಮರ್ ಮತ್ತು ಮೆಹ್ಸೂದ್ ಕುಟುಂಬವು ಈ ವರದಿಗಳನ್ನು ತಳ್ಳಿಹಾಕಿತ್ತು.

ಉತ್ತರ ವಜರಿಸ್ತಾನದ ಲಾಧಾ, ಕಾನಿ, ಗರಂ, ಸಾಲಾಯ್ ರೋಗ ಮುಂತಾದ ಪ್ರದೇಶಗಳಿಗೂ ಮೆಹ್ಸೂದ್ ಭೇಟಿ ನೀಡಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

ಮೆಹ್ಸೂದ್ ಸತ್ತಿಲ್ಲ ಎಂಬುದನ್ನು ದೃಢಪಡಿಸುವ ಸಲುವಾಗಿ ಈ ಭೇಟಿಯನ್ನು ಬುಡಗಟ್ಟು ನಾಯಕರು ಸಿದ್ಧಪಡಿಸಿದ್ದರು ಎಂದು ವರದಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜರ್ದಾರಿಯಿಂದ ಪಾಕ್ ಭದ್ರತಾ ವ್ಯವಸ್ಥೆ ಅವಲೋಕನ
ಅಮೆರಿಕ ಪಡೆಯಿಂದ ಕ್ಷಿಪಣಿ ದಾಳಿ:20 ಸಾವು
ಭಾರತ ಭೇಟಿ ವೇಳೆ ಅಣುಬಂಧಕ್ಕೆ ಸಹಿ ಅಸಾಧ್ಯ:ರೈಸ್
ಅಫ್ಘಾನ್‌‌ನಿಂದ ನಿರಾಶ್ರಿತರು ತೊಲಗಲು ಪಾಕ್ ತಾಕೀತು
ಭಯೋತ್ಪಾದನೆ ಮುಕ್ತ ರಾಷ್ಟ್ರವಾಗುವವರೆಗೆ ಹೋರಾಟ:ಪಾಕ್
ಪಾಕ್ ಸಚಿವರಿಂದ ಸರಬ್‌ಜಿತ್ ಭೇಟಿ