ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಯುಎಸ್ ಪಡೆ ದಾಳಿಗೆ ಇರಾಕ್ ಅಲ್‌ಖೈದಾ ಮುಖಂಡ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಎಸ್ ಪಡೆ ದಾಳಿಗೆ ಇರಾಕ್ ಅಲ್‌ಖೈದಾ ಮುಖಂಡ ಬಲಿ
ಇತ್ತೀಚಿಗಿನ ಬಾಗ್ದಾದ್ ಬಾಂಬ್ ದಾಳಿಯ ರೂವಾರಿಯಾಗಿರುವ ಅಲ್‌ಖೈದಾ ಮುಖಂಡ ಇರಾಕ್‌ನಲ್ಲಿ ಅಮೆರಿಕ ಸೇನಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಸಾವನ್ನಪ್ಪಿರುವುದಾಗಿ ಯುಎಸ್ ಸೇನಾಪಡೆ ಆರೋಪಿಸಿದೆ.

ಅಹ್ಮದ್ ಮಹ್ಮುದ್ ಜುಡು ಅಲ್ ಜುಬಾಯ್ದಿ ಅಬು ಅಸಾದ್ ಆಲಿಯಾಸ್ ಅಬು ರಾಮಿ ಎಂದೇ ಕರೆಯಲಾಗುವ ಇರಾಕಿನ ಅಲ್‌ಖೈದಾ ನಾಯಕ ಮೃತಪಟ್ಟಿರುವುದಾಗಿ ಅಮೆರಿಕ ನೇತೃತ್ವದ ಪಡೆಗಳು ತಿಳಿಸಿವೆ.

ಬಾಗ್ದಾದ್‌ನ ಅಧಾಮಿಯಾ ಪ್ರದೇಶದ ಕಟ್ಟಡವೊಂದರಲ್ಲಿ ಅಬು ರಾಮಿ ಅಡಗಿರುವುದಾಗಿ ಗುಪ್ತಚರ ವರದಿಗಳಿಂದ ತಿಳಿದು ಬಂದ ನಂತರ, ಅಮೆರಿಕ ಪಡೆಗಳು ಈ ಕಟ್ಟಡವನ್ನು ಸುತ್ತುವರಿದು ಶರಣಾಗುವಂತೆ ತಿಳಿಸಿದ್ದು,ಬಳಿಕ ನಡೆದ ದಾಳಿಯಲ್ಲಿ ಆತ ಸಾವನ್ನಪ್ಪಿರುವುದಾಗಿ ಸೇನೆ ಹೇಳಿದೆ.

ಈ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ ಅಬು ರಾಮಿ ಮತ್ತು ಮಹಿಳೆಯೊಬ್ಬಳು ಸಾವಿಗೀಡಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಸುಮಾರು ಎಂಟು ಮಂದಿಯ ಸಾವಿಗೆ ಕಾರಣವಾದ ಗುರುವಾರದ ಬಾಂಬ್ ದಾಳಿಗೂ ಅಬು ರಾಮಿಯೇ ಹೊಣೆ ಎಂದು ನಂಬಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್‌ ಬುಡಕಟ್ಟು ಪ್ರದೇಶದಲ್ಲಿ ಮೆಹ್ಸೂದ್ ಪ್ರತ್ಯಕ್ಷ !
ಜರ್ದಾರಿಯಿಂದ ಪಾಕ್ ಭದ್ರತಾ ವ್ಯವಸ್ಥೆ ಅವಲೋಕನ
ಅಮೆರಿಕ ಪಡೆಯಿಂದ ಕ್ಷಿಪಣಿ ದಾಳಿ:20 ಸಾವು
ಭಾರತ ಭೇಟಿ ವೇಳೆ ಅಣುಬಂಧಕ್ಕೆ ಸಹಿ ಅಸಾಧ್ಯ:ರೈಸ್
ಅಫ್ಘಾನ್‌‌ನಿಂದ ನಿರಾಶ್ರಿತರು ತೊಲಗಲು ಪಾಕ್ ತಾಕೀತು
ಭಯೋತ್ಪಾದನೆ ಮುಕ್ತ ರಾಷ್ಟ್ರವಾಗುವವರೆಗೆ ಹೋರಾಟ:ಪಾಕ್