ಪಾಕಿಸ್ತಾನಕ್ಕೆ ಭಾರತದ ಭೀತಿಯಿಲ್ಲ ಎಂದು ಹೇಳಿದ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತ್ಯೇಕವಾದಿಗಳು ಭಯೋತ್ಪಾದಕರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪಾಕ್‌ಗೆ ಎಂದಿಗೂ ಭಾರತದ ಭಯವಿಲ್ಲ.ಅದೇ ವೇಳೆ ವಿದೇಶದಲ್ಲಿ ಭಾರತದ ಪ್ರಭಾವದ ಬಗ್ಗೆ ಪಾಕ್ ಸರ್ಕಾರ ಹೆದರಿಕೊಂಡಿಲ್ಲ ಎಂದು ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಜರ್ದಾರಿ ಹೇಳಿದ್ದಾರೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಕಾಶ್ಮೀರದಲ್ಲಿ ಹೋರಾಡುತ್ತಿರುವಂತಹ ಉಗ್ರರನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಯೋಧರೆಂದು ಕರೆದಿರುವುದನ್ನು ಖಂಡಿಸಿದ ಜರ್ದಾರಿ,ಕಾಶ್ಮೀರದಲ್ಲಿರುವ ಉಗ್ರರು ಯೋಧರಲ್ಲ ಭಯೋತ್ಪಾದಕರು ಎಂದು ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದದ ಬಗ್ಗೆ ಕೇಳಿದ ಮಾಧ್ಯಮದ ಪ್ರಶ್ನೆಗೆ ಇದರಲ್ಲಿ ತಮಗೆ ಯಾವುದೇ ರೀತಿಯ ವಿರೋಧ ಇಲ್ಲ ಎಂಬುದಾಗಿ ಅವರು ಹೇಳಿದ್ದಾರೆ. |