ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್‌ನ ನಂ.1 ಶತ್ರು: ಭಾರತ ಅಲ್ಲ, ಅಮೆರಿಕ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ನ ನಂ.1 ಶತ್ರು: ಭಾರತ ಅಲ್ಲ, ಅಮೆರಿಕ!
ಪಾಕಿಸ್ತಾನದ ಬಗ್ಗೆ ಭಾರತಕ್ಕೆ ಎಷ್ಟರ ಮಟ್ಟಿಗೆ ಬೆದರಿಕೆಯಿದೆ? ಇತ್ತೀಚೆಗೆ ಬಿಬಿಸಿ 23 ರಾಷ್ಟ್ರಗಳ ಸಮೀಕ್ಷೆ ನಡೆಸಿರುವ ಪ್ರಕಾರ, ಪಾಕಿಸ್ತಾನೀಯರು ಇತ್ತೀಚೆಗೆ ಭಾರತಕ್ಕಿಂತ ಹೆಚ್ಚಾಗಿ ಅಮೆರಿಕವನ್ನು ದ್ವೇಷಿಸುತ್ತಿದ್ದು, ಪಾಕಿಸ್ತಾನೀಯರ ಪಾಲಿಗೆ ಭಾರತವು ಶತ್ರು ನಂ.1 ಸ್ಥಾನದಿಂದ ಕೆಳಗಿಳಿದಿದೆ.

ಅಂತೆಯೇ ಈ ಸಮೀಕ್ಷೆ ಪ್ರಕಾರ, ಅಲ್ ಖಾಯಿದಾ ಉಗ್ರವಾದಿ ಸಂಘಟನೆಯ ಬಗ್ಗೆ ಒಂದಿಷ್ಟು ಧನಾತ್ಮಕ ಅಭಿಪ್ರಾಯ ಹೊಂದಿರುವ ರಾಷ್ಟ್ರಗಳೆಂದರೆ ಪಾಕಿಸ್ತಾನ ಮತ್ತು ಈಜಿಪ್ಟ್ ಮಾತ್ರ.

ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನ ಜಾಲದ ಬಗ್ಗೆ ಪಾಕಿಸ್ತಾನದಲ್ಲಿ ಋಣಾತ್ಮಕ ಅಭಿಪ್ರಾಯ ಹೊಂದಿರುವವರು ಕೇವಲ ಶೇ.19 ಮಂದಿ ಮಾತ್ರ ಎನ್ನುತ್ತದೆ ಈ ಸಮೀಕ್ಷೆ. ಹಾಗಿದ್ದರೆ, ಈ ಜನಾಭಿಪ್ರಾಯವೇ ಭಾರತವು ತನ್ನ ನೆರೆ ರಾಷ್ಟ್ರದ ಸ್ಥಿರತೆ ಮತ್ತು ಉದ್ದೇಶಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಕಾರಣವಾಗುತ್ತಿದೆಯೇ? ಇಲ್ಲ ಎನ್ನುತ್ತಾರೆ ಪಾಕಿಸ್ತಾನೀ ತಜ್ಞರು. ಸಮೀಕ್ಷೆಯನ್ನು ಅವರು ವಿಶ್ಲೇಷಿಸುವುದು ಹೇಗೆಂದರೆ, ಪಾಕಿಸ್ತಾನೀಯರು ಅಲ್ ಖಾಯಿದಾವನ್ನು ಬೆಂಬಲಿಸುವುದಕ್ಕಿಂತಲೂ ಹೆಚ್ಚಾಗಿ ಅಮೆರಿಕವನ್ನು ದ್ವೇಷಿಸುವತ್ತ ಆಸಕ್ತಿ ತೋರುತ್ತಾರೆ.

ಆದರೆ, ಈ ದ್ವೇಷವು ಅಮೆರಿಕದ ವಿರುದ್ಧವೇ ಅಥವಾ ಬುಷ್ ಆಡಳಿತದ ವಿರುದ್ಧ ಮಾತ್ರವೇ ಎಂಬುದರ ಬಗ್ಗೆ ಕೊಂಚ ಭಿನ್ನಾಭಿಪ್ರಾಯಗಳಿವೆ. ವಿಶೇಷವೆಂದರೆ, ಈ ಎಲ್ಲಾ ಬೆಳವಣಿಗೆಗಳಿಂದ ಭಾರತಕ್ಕಂತೂ ಕೊಂಚ ಲಾಭವೇ ಆಗಿದೆ. ಅದೀಗ ಪಾಕಿಸ್ತಾನದ ನಂ.1 ಶತ್ರು ಆಗಿ ಉಳಿದಿಲ್ಲ. "ಹಲವು ದಶಕಗಳಿಂದ ಭಾರತವು ಪಾಕಿಸ್ತಾನದ ನಂ.1 ಶತ್ರು ಎಂಬ ಭಾವನೆ ಪಾಕಿಸ್ತಾನೀಯರಲ್ಲಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ" ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಇಜಾಜ್ ಶಫಿ ಗಿಲಾನಿ. ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಅಮೆರಿಕ-ವಿರೋಧಿ ಭಾವನೆಯು ಭಾರತ-ವಿರೋಧಿ ಮನೋಭಾವವನ್ನು ಗಣನೀಯವಾಗಿ ತಗ್ಗಿಸಿದೆ ಎನ್ನುತ್ತಾರವರು.

2007ರ ಅಂತ್ಯಭಾಗದಲ್ಲಿ ನಡೆಸಿದ ಈ ಸಮೀಕ್ಷೆಯ ಪ್ರಕಾರ, ಭಾರತದೊಂದಿಗೆ ವಾಣಿಜ್ಯ ವ್ಯವಹಾರ ಮುಂದುವರಿಸಲು ಪಾಕಿಸ್ತಾನೀಯರಲ್ಲಿ ಹೆಚ್ಚಿನವರು ಬಯಸುತ್ತಾರೆ. ಮತ್ತೆ ಕೆಲವರ ಮನಸ್ಸಿನಲ್ಲಿ, ಮುಷರಫ್ ಮತ್ತು ಅವರ ಉತ್ತರಾಧಿಕಾರಿ ಜರ್ದಾರಿ, ಭಾರತದ ಮನವೊಲಿಕೆ ನಿಟ್ಟಿನಲ್ಲಿ ಅತೀ ಹೆಚ್ಚು ಎನ್ನಬಹುದಾದಷ್ಟು ಮುಂದುವರಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಯೋತ್ಪಾದಕರು: ಜರ್ದಾರಿ ಹೇಳಿಕೆಗೆ ಪಿಎಂಎಲ್ ಆಕ್ಷೇಪ
ಕಾಶ್ಮೀರ ಪ್ರತ್ಯೇಕತವಾದಿಗಳು ಭಯೋತ್ಪಾದಕರು:ಜರ್ದಾರಿ
ಅ.8:ಅಣುಬಂಧ ಮಸೂದೆಗೆ ಬುಷ್ ಅಂಕಿತ
ಯುಎಸ್ ಪಡೆ ದಾಳಿಗೆ ಇರಾಕ್ ಅಲ್‌ಖೈದಾ ಮುಖಂಡ ಬಲಿ
ಪಾಕ್‌ ಬುಡಕಟ್ಟು ಪ್ರದೇಶದಲ್ಲಿ ಮೆಹ್ಸೂದ್ ಪ್ರತ್ಯಕ್ಷ !
ಜರ್ದಾರಿಯಿಂದ ಪಾಕ್ ಭದ್ರತಾ ವ್ಯವಸ್ಥೆ ಅವಲೋಕನ