ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಸರಬ್‌ಜಿತ್ ಸಿಂಗ್‌ನನ್ನು ಸೋಮವಾರ ಪಾಕ್‌ನ ಕಾನೂನು ಸಚಿವ ಫಾರೂಕ್ ನೇಕ್ ಅವರು ಲಾಹೋರ್ ಕೋಟ್ ಲಾಕ್‌ಪಥ್ ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.ಸರಬ್‌ಜಿತ್‌ಗೆ ಕ್ಷಮಾದಾನ ನೀಡುವಂತೆ ಭಾರತ ಸರ್ಕಾರ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಚಿವರು ಸರಬ್‌ಜಿತ್‌ನನ್ನು ಭೇಟಿಯಾಗಿದ್ದು,ಸರಬ್ ಮರಣದಂಡನೆ ಶಿಕ್ಷೆಯ ಕುರಿತು ಪುನರ್‌ಪರಿಶೀಲನೆ ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.ಆದರೆ ಸರಬ್‌ಜಿತ್ ಶಿಕ್ಷೆಯ ಕುರಿತು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನಮಂತ್ರಿ ಯೂಸೂಫ್ ರಾಜಾ ಗಿಲಾನಿ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.ಅಲ್ಲದೇ ಭಾರತದಲ್ಲಿ ಬಂಧಿಯಾಗಿರುವ ಪಾಕ್ ಕೈದಿಗಳನ್ನು ಕೂಡ ಮಾನವೀಯ ನೆಲೆಯಲ್ಲಿ ಸ್ವದೇಶಕ್ಕೆ ವಾಪಸು ಕಳುಹಿಸುವಂತೆ ಭಾರತದ ಅಧಿಕಾರಿಗಳು ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡರು.1990 ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಸಂಭವಿಸಿದ ನಾಲ್ಕು ಬಾಂಬ್ ಸ್ಫೋಟ ದಾಳಿಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ಬಾಂಬ್ ದಾಳಿಯಲ್ಲಿ 14ಮಂದಿ ಬಲಿಯಾಗಿದ್ದರು. 42ರ ಹರೆಯದ ಸರಬ್‌ಜಿತ್ ನಿರಪರಾಧಿಯಾಗಿದ್ದು, ಅವರಿಗೆ ಕ್ಷಮಾದಾನ ನೀಡುವಂತೆ ಸಿಂಗ್ ಕುಟುಂಬ ಈಗಾಗಲೇ ಪಾಕಿಸ್ತಾನಕ್ಕೆ ತೆರಳಿ ಮನವಿ ಸಲ್ಲಿಸಿತ್ತು. |
ಸಂಬಂಧಿತ ಮಾಹಿತಿ ಹುಡುಕಿ |
|