ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ದೋಷಪೂರಿತ ಸೋಲ್ಡರಿಂಗ್‌ನಿಂದ 'ಬಿಗ್ ಬ್ಯಾಂಗ್' ಹಿನ್ನಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೋಷಪೂರಿತ ಸೋಲ್ಡರಿಂಗ್‌ನಿಂದ 'ಬಿಗ್ ಬ್ಯಾಂಗ್' ಹಿನ್ನಡೆ
ND
ವಿಶ್ವದ ಅತಿದೊಡ್ಡ ಅಣು ತಾಡಕ ಎಂಬ ಹೆಗ್ಗಳಿಕೆಯ ಲಾರ್ಜ್ ಹೆಡ್ರಾನ್ ಕೊಲೈಡರ್ (ಎಲ್ಎಚ್‌ಸಿ) ಭರ್ಜರಿ ಪ್ರಚಾರದೊಂದಿಗೆ ಆರಂಭವಾದ ಕೆಲವೇ ದಿನಗಳಲ್ಲಿ ವೈಫಲ್ಯ ಅನುಭವಿಸಿ ಹಿನ್ನಡೆ ಕಾಣಲು ದೋಷಪೂರಿತ ಸೋಲ್ಡರಿಂಗ್ ಕಾರಣ ಎಂದಿದ್ದಾರೆ ವಿಜ್ಞಾನಿಗಳು.

ಎಲ್ಎಚ್‌ಸಿಯ 10 ಸಾವಿರಕ್ಕೂ ಹೆಚ್ಚು ಸಂಪರ್ಕತಾಣಗಳಲ್ಲಿ ಎಲ್ಲೋ ಒಂದು ಕಡೆ ಸೋಲ್ಡರಿಂಗ್ ಮಾಡಿರುವುದು ಸಮರ್ಪಕವಾಗಿಲ್ಲ. ಇದರಿಂದ ಸಂಪರ್ಕ ದೋಷ ಕಾಣಿಸಿ ತೊಂದರೆಯಾಗಿದೆ ಎಂದು ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆ 'ಸರ್ನ್' ವಿಜ್ಞಾನ ಕೇಂದ್ರದ ಎಲ್ಎಚ್‌ಸಿ ಪ್ರಾಜೆಕ್ಟ್ ಲೀಡರ್ ಲಿನ್ ಇವಾನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಮೂಲ ಸಮಸ್ಯೆ ಅತ್ಯಂತ ಸಣ್ಣದು. ವಿದ್ಯುತ್ ಸಂಪರ್ಕಗಳಲ್ಲಿ ಇಂಥ ಸಮಸ್ಯೆಗಳೆಲ್ಲಾ ಮಾಮೂಲಿ. 10 ಸಾವಿರದಲ್ಲಿ ಒಂದು ಕಡೆ ಈ ದೋಷ ಗೋಚರಿಸುವುದು ತೀರಾ ಕೆಟ್ಟದೇನಲ್ಲವಾದರೂ, ಇದರ ಪರಿಣಾಮ ಮಾತ್ರ ಊಹೆಗೆ ನಿಲುಕದ್ದು ಎಂದು ಅವರು ತಿಳಿಸಿದ್ದಾರೆ.

ಈ ಪುಟ್ಟ ದೋಷದಿಂದಾಗಿ ಕಾರ್ಯಾಚರಣೆಯೇ ಕನಿಷ್ಠ ಎರಡು ತಿಂಗಳ ಕಾಲ ಸ್ಥಗಿತಗೊಳ್ಳಬೇಕಾಗಿದೆ. ಅಂದರೆ ಬೇಸಿಗೆ ಬರುವವರೆಗೂ ಕೊಲೈಡರ್ ಪುನರಾರಂಭವಾಗದು. ಯಾಕೆಂದರೆ ಚಳಿಗಾಲದಲ್ಲಿ ವಿದ್ಯುತ್ ದರಗಳು ತೀವ್ರ ದುಬಾರಿಯಾಗಿರುತ್ತವೆ.

ಕೊಲೈಡರ್ ಯಂತ್ರವಿನ್ನೂ ತೀವ್ರ ಶೀತಲವಾಗಿರುವುದರಿಂದ ಈ ದೋಷವನ್ನು ಸರಿಯಾಗಿ ತಪಾಸಣೆ ಮಾಡುವುದು ಇನ್ನೂ ಸಾಧ್ಯವಾಗಿಲ್ಲ ಎಂದಿದ್ದಾರೆ ಇವಾನ್ಸ್.

ದೋಷವುಳ್ಳ ಭಾಗವನ್ನು ನಿಧಾನವಾಗಿ ಬಿಸಿ ಮಾಡಿ ಕೊಠಡಿಯ ಉಷ್ಣತೆಗೆ ಬರುವಂತೆ ಮಾಡಬೇಕು. ಇದಕ್ಕೆ ಸುಮಾರು ಐದು ವಾರ ಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರವೇ ಮಾನವರು ಅದರೊಳಗೆ ಹೋಗಿ ದುರಸ್ತಿ ಕಾರ್ಯ ಮಾಡಬಹುದಾಗಿದೆ. ದುರಸ್ತಿಯಾದ ಬಳಿಕ ಪುನಃ ಅದನ್ನು ಶೈತ್ಯಗೊಳಿಸಲು ಮತ್ತೆ ಐದು ವಾರಗಳಾದರೂ ಬೇಕಾಗುತ್ತದೆ ಎಂದು ಇವಾನ್ಸ್ ವಿವರಿಸಿದ್ದಾರೆ.

ಪರಮಾಣು ಭೌತಕಣಗಳ ತಾಡನ ಪರೀಕ್ಷೆಯನ್ನು ಶೀಘ್ರವೇ ಆರಂಭಿಸಿ, ಚಳಿಗಾಲದ ವಿದ್ಯುತ್ ಸಮಸ್ಯೆಯ ಮೊದಲೇ ಪೂರ್ಣಗೊಳಿಸಲು ಈ ಹಿಂದೆ ವಿಜ್ಞಾನಿಗಳು ಉದ್ದೇಶಿಸಿದ್ದರು. ಆದರೆ ಇದೀಗ ಮುಂದಿನ ಏಪ್ರಿಲ್ ತಿಂಗಳವರೆಗೂ ಇದಕ್ಕಾಗಿ ಕಾಯಬೇಕಾಗುತ್ತದೆ ಎಂದಿದ್ದಾರೆ ಇವಾನ್ಸ್.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಚ್ಐವಿ ಸಂಶೋಧಿಸಿದ ವಿಜ್ಞಾನಿಗಳಿಗೆ ನೋಬೆಲ್
ಅಣು ಒಪ್ಪಂದದಿಂದ ನೂತನ ಬಿಕ್ಕಟ್ಟು: ಇರಾನ್
ಸರಬ್‌‌‌ಜಿತ್‌ ಭವಿಷ್ಯ ಜರ್ದಾರಿ ಕೈಯಲ್ಲಿ:ಫಾರೂಕ್
ಶ್ರೀಲಂಕಾ ಬಾಂಬ್ ದಾಳಿ: 22 ಸಾವು
ಪಾಕ್‌ನ ನಂ.1 ಶತ್ರು: ಭಾರತ ಅಲ್ಲ, ಅಮೆರಿಕ!
ಭಯೋತ್ಪಾದಕರು: ಜರ್ದಾರಿ ಹೇಳಿಕೆಗೆ ಪಿಎಂಎಲ್ ಆಕ್ಷೇಪ