ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಯೋತ್ಪಾದನೆ ನಿಗ್ರಹಕ್ಕೆ ರಾಷ್ಟ್ರೀಯ ನೀತಿ ಅಗತ್ಯ: ಶರೀಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆ ನಿಗ್ರಹಕ್ಕೆ ರಾಷ್ಟ್ರೀಯ ನೀತಿ ಅಗತ್ಯ: ಶರೀಫ್
ದೇಶದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಫೆಡರಲ್ ಸರಕಾರವು ರಾಷ್ಟ್ರೀಯ ನೀತಿಯನ್ನು ರಚಿಸಬೇಕು ಎಂದು ಪಾಕಿಸ್ತಾನ ವಿರೋಧ ಪಕ್ಷದ ನಾಯಕ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮಂಗಳವಾರ ಆಗ್ರಹಿಸಿದ್ದಾರೆ.

ಲಾಹೋರಿನ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶರೀಫ್, ಯಾವುದೇ ಸ್ವತಂತ್ರ ಪಕ್ಷವು ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ವಿಶ್ವಾಸ ಗಳಿಸಿಕೊಂಡು, ಭಯೋತ್ಪಾದನೆಯ ವಿರುದ್ಧ ಹೋರಾಡಲು ರಾಷ್ಟ್ರೀಯ ನೀತಿಯನ್ನು ಅನುಸರಿಸಬೇಕು ಎಂದು ಅವರು ಹೇಳಿದರು.

ದೇಶದಾದ್ಯಂತ ಭದ್ರತಾ ವ್ಯವಸ್ಥೆಯ ಬಗ್ಗೆ ಆಸಿಫ್ ಅಲಿ ಜರ್ದಾರಿ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ಈ ಹೇಳಿಕೆಯನ್ನು ನೀಡಿದ್ದಾರೆ.

ಆಗಸ್ಟ್ ತಿಂಗಳವರೆಗೆ ಪಾಕಿಸ್ತಾನ ಆಡಳಿತಾರೂಢ ಪಿಪಿಪಿ ಪಕ್ಷದ ಭಾಗವಾಗಿದ್ದ ಪಿಎಂಎಲ್-ಎನ್ , ಕಳೆದ ವರ್ಷದ ತುರ್ತು ಪರಿಸ್ಥಿತಿಯ ವೇಳೆ ಪದಚ್ಯುತಗೊಂಡ ನ್ಯಾಯಾಧೀಶರನ್ನು ಪುನರ್ ನೇಮಕಗೊಳಿಸಲು ಪಾಕಿಸ್ತಾನ ಪೀಪಲ್ ಪಾರ್ಟಿ ಅಧ್ಯಕ್ಷ ಜರ್ದಾರಿ ವಿಫಲಗೊಂಡ ನಂತರ, ಸಮ್ಮಿಶ್ರ ಸರಕಾರದಿಂದ ಹೊರನಡೆದಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೋಷಪೂರಿತ ಸೋಲ್ಡರಿಂಗ್‌ನಿಂದ 'ಬಿಗ್ ಬ್ಯಾಂಗ್' ಹಿನ್ನಡೆ
ಭಯೋತ್ಪಾದನೆ ನಿಗ್ರಹಕ್ಕೆ ಪಾಕ್ ಬದ್ಧ: ಜರ್ದಾರಿ
ಎಚ್ಐವಿ ಸಂಶೋಧಿಸಿದ ವಿಜ್ಞಾನಿಗಳಿಗೆ ನೋಬೆಲ್
ಅಣು ಒಪ್ಪಂದದಿಂದ ನೂತನ ಬಿಕ್ಕಟ್ಟು: ಇರಾನ್
ಸರಬ್‌‌‌ಜಿತ್‌ ಭವಿಷ್ಯ ಜರ್ದಾರಿ ಕೈಯಲ್ಲಿ:ಫಾರೂಕ್
ಶ್ರೀಲಂಕಾ ಬಾಂಬ್ ದಾಳಿ: 22 ಸಾವು