ಅಫಘಾನಿಸ್ತಾನ್‌ನ ದಕ್ಷಿಣ ಭಾಗದಲ್ಲಿರುವ ಪ್ರದೇಶದಲ್ಲಿ ಅಫಘಾನ್ ಸೇನೆ ಹಾಗೂ ಅಮೆರಿಕದ ಮಿತ್ರಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತಾಲಿಬಾನ್ ಇಗ್ರರೊಂದಿಗೆ ನಡೆಸಿದ ಗುಂಡಿನ ಚಕಮಕಿಯಲ್ಲಿ 43 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಝಬುಲ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕ ಮಿತ್ರಪಡೆಗಳ ಮೇಲೆ ಅನೇಕ ದಿಕ್ಕುಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದಾಗ ಮರುದಾಳಿ ನಡೆಸಿದ ಅಮೆರಿಕದ ಮಿತ್ರಪಡೆಗಳ ಗುಂಡಿನ ದಾಳಿಗೆ 43 ತಾಲಿಬಾನ್ ಉಗ್ರರು ಬಲಿಯಾಗಿದ್ದಾರೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ. ಅಫಘಾನ್ ಸೇನಾಪಡೆ ಹಾಗೂ ಅಮೆರಿಕ ಮಿತ್ರಪಡೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ತಾಲಿಬಾನ್ ಉಗ್ರರು ಹಾಗೂ ಪ್ರತ್ಯಕತಾವಾದಿಗಳು ನಿರಂತರ ದಾಳಿಗಳನ್ನು ನಡೆಸುತ್ತಿವೆ ಎಂದು ಅಮೆರಿಕ ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ. |