ಕಾಠ್ಮಂಡು : ನೇಪಾಳದ ಎವರೆಸ್ಟ್ ಪರ್ವತಪ್ರದೇಶದಲ್ಲಿ ಪ್ರಯಾಣಿಕರ ವಿಮಾನವೊಂದು ಅಪಘಾತಕ್ಕೀಡಾಗಿ ಜರ್ಮನಿಯ 12 ಪ್ರವಾಸಿಗಳು ಅಸುನೀಗಿದ್ದಾರೆ. ಒಟ್ಟು 18 ವಿದೇಶಿಯರು ಈ ಅಪಘಾತದಲ್ಲಿ ಸತ್ತಿದ್ದಾರೆಂದು ಶಂಕಿಸಲಾಗಿರುವುದಾಗಿ ವಿಮಾನನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಲುಕ್ಲಾದ ತೇನ್‌ಸಿಂಗ್-ಹಿಲೇರಿ ವಿಮಾನನಿಲ್ದಾಣದಲ್ಲಿ ಯೇಟಿ ಏರ್‌ಲೈನ್ಸ್ ವಿಮಾನವು ಭೂಸ್ಪರ್ಶ ಮಾಡುತ್ತಿದ್ದಾಗ ಅಪಘಾತಕ್ಕೆ ತುತ್ತಾಯಿತೆಂದು ಅವರು ಹೇಳಿದ್ದಾರೆ.ಪರ್ವತಮಯ ಪ್ರದೇಶದ 9380 ಅಡಿ ಎತ್ತರದಲ್ಲಿರುವ ವಿಮಾನನಿಲ್ದಾಣವು ಹಿಮಾಲಯದಲ್ಲಿ ಸಾಹಸಯಾತ್ರೆ ಕೈಗೊಳ್ಳುವ ಪರ್ವತಾರೋಹಿಗಳಿಗೆ ಮತ್ತು ಟ್ರೆಕ್ಕರುಗಳಿಗೆ ಜನಪ್ರಿಯವಾಗಿತ್ತು.
ವಿಮಾನವು ಇಳಿದಾಣದ ಗಡಿಗೆ ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡಿತೆಂದು ಹೇಳಲಾಗಿದೆ. ಪ್ರಯಾಣಿಕರ ಪಟ್ಟಿಯಲ್ಲಿ 12 ಜರ್ಮನ್ ಮತ್ತು ಇಬ್ಬರು ಸ್ವಿಸ್ ಪ್ರಯಾಣಿಕರಿದ್ದರೆಂದು ವಿಮಾನನಿಲ್ದಾಣದ ಅಧಿಕಾರಿ ಮೋಹನ್ ಅಧಿಕಾರಿ ತಿಳಿಸಿದರು. |