ಬುಧವಾರದಂದು ನೇಪಾಳ ಪ್ರಮುಖ ಹಿಂದೂ ಹಬ್ಬ ದಾಶೇನ್ ಆಚರಣೆಯ ಸಂತಸದಲ್ಲಿದ್ದರೆ, ಬಿಕಿನಿ ಕಿಲ್ಲರ್ ಚಾರ್ಲ್ ಶೋಭರಾಜ್‌ಗೆ ಮಾತ್ರ ಮಹತ್ವದ ದಿನವಾಗಿತ್ತು. ಆ ಸಂತಸಕ್ಕೂ ಕಾರಣವಿತ್ತು.
ಅನೇಕ ವಿರೋಧಗಳ ನಡುವೆಯೂ, ಬಿಕಿನಿ ಕಿಲ್ಲರ್ ಎಂದೇ ಕರೆಯಲ್ಪಡುವ ಚಾರ್ಲ್ಸ್ ಶೋಭರಾಜ್, ತನ್ನ ನೇಪಾಳಿ ಪ್ರಿಯತಮೆ ನಿಹಿತಾ ಬಿಸ್ವಾಸ್ ಅವರನ್ನು ಬುಧವಾರ ವಿವಾಹವಾದರು. ಇವರಿಬ್ಬರ ಪ್ರೇಮದ ವಿಚಾರವು ವಿಶ್ವದಾದ್ಯಂತ ಚರ್ಚೆಗೊಳಪಟ್ಟಿತ್ತು.
ಇದೊಂದು ಸಾಮಾನ್ಯ ಮತ್ತು ಸರಳ ನೇಪಾಳಿ ಮದುವೆ ಸಮಾರಂಭವಾಗಿತ್ತು ಎಂದು ನಿಹಿತಾ ಅವರ ಹಿರಿಯ ಸಹೋದರ ವಿಜಯ್ ಹೇಳಿದ್ದಾರೆ.
ಕೊಲೆ ಅಪವಾದದಲ್ಲಿ ಕಾಠ್ಮಂಡುವಿನಲ್ಲಿ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ 64 ವರ್ಷದ ಈ ಮದುಮಗನನ್ನು ರಕ್ಷಿಸುವ ಸಲುವಾಗಿ ನಿಹಿತಾ ತಾಯಿ ಶಕುಂತಲಾ ತಾಪಾ ಅವರ ಪ್ರಯತ್ನದಲ್ಲಿ ವಿಜಯ್ ಅವರೂ ಭಾಗಿಯಾಗಿದ್ದರು.
ಪ್ರೌಢಶಾಲಾ ವಿದ್ಯಾರ್ಥಿನಿಯಾಗಿರುವ ನಿಹಿತಾ ಈ ವರ್ಷದ ಪ್ರಾರಂಭದಲ್ಲಿ ಶೋಭರಾಜ್ ಅವರನ್ನು ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದೊಂದು 'ಮೊದಲ ನೋಟದ ಪ್ರೇಮ' ಎಂಬುದಾಗಿ ಶೋಭರಾಜ್ ತನ್ನ ಪ್ರೇಮವನ್ನು ಬಣ್ಣಿಸಿದ್ದರು.
ಕಾಠ್ಮಂಡುವಿನಲ್ಲಿ ನೆಲೆಸಿರುವ ನೇಹಾ ಅಲಿಯಾಲ್ ನಿಹಿತಾ ಬಿಸ್ವಾಸ್ ಅವರ ತಾಯಿ ನೇಪಾಳಿಯಾದರೆ, ತಂದೆ ಬೆಂಗಾಲಿ ಮೂಲದವರಾಗಿದ್ದಾರೆ. 20 ವರ್ಷದ ನೇಹಾ ಶೋಭರಾಜ್‌ನನ್ನು ಭೇಟಿ ಮಾಡಲು ನಿರಂತರವಾಗಿ ಜೈಲಿಗೆ ಆಗಮಿಸುತ್ತಿದ್ದರು.
ಜುಲೈ ತಿಂಗಳಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಶೋಭರಾಜ್ ಮತ್ತು ನಿಹಿತಾ ವಿಶ್ವದೆಲ್ಲೆಡೆ ಎಲ್ಲೆಡೆ ಕುತೂಹಲ ಮೂಡಿಸಿದ್ದರು. ಪ್ರಾರಂಭದಲ್ಲಿ ಶೋಭರಾಜ್ ಬಿಡುಗಡೆಯ ನಂತರವೇ ಮದುವೆಯಾಗುವುದೆಂದು ಈ ಜೋಡಿ ತೀರ್ಮಾನಿಸಿತ್ತು, ಆದರೆ, ನಂತರ ತಮ್ಮಿಬ್ಬರ ನಿಲುವನ್ನು ಬದಲಾಯಿಸಿದ್ದು, ಬುಧವಾರದಂದು ನಡೆದ ಸರಳ ಸಮಾರಂಭದಲ್ಲಿ ಈ ಜೋಡಿಯು ಸಪ್ತಪದಿ ತುಳಿಯಿತು.
ಏನೇ ಆದರೂ, ಧರ್ಮಗುರುಗಳ ಉಪಸ್ಥಿತಿಯಿಲ್ಲದೆ ನಡೆದ ಮದುವೆಯನ್ನು ಪರಿಗಣಿಸಲು ಸಾಧ್ಯವಿಲ್ಲ. ಶೋಭರಾಜ್ ಫ್ರಾನ್ಸ್ ನಾಗರಿಕನಾದ ಕಾರಣ ಪ್ಯಾರಿಸ್‌ನಲ್ಲಿ ಮತ್ತೊಮ್ಮೆ ಮದುವೆ ಕಾರ್ಯವನ್ನು ನಡೆಸಬೇಕಾಗಿದೆ ಎಂದು ವಿಜಯ್ ಹೇಳಿದ್ದಾರೆ.
ಅಮೆರಿಕನ್ ಮತ್ತು ಕೆನಡಿಯನ್ ಪ್ರವಾಸಿಗರನ್ನು ಕೊಲೆಗೈದ ಆರೋಪದಲ್ಲಿ ಕುಖ್ಯಾತಿ ಕ್ರಿಮಿನಲ್ ಶೋಭರಾಜ್‌ನನ್ನು ಸೆಪ್ಟೆಂಬರ್ 2003ರಲ್ಲಿ ಕಾಠ್ಮಂಡುವಿನಲ್ಲಿ ಬಂಧಿಸಲಾಗಿದ್ದು, ಜಿಲ್ಲಾ ನ್ಯಾಯಾಲಯವು 2004ರಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. |