ಫ್ರಾನ್ಸ್‌ನ ಕಾದಂಬರಿಕಾರ ಜಾನ್‌ಮರಿ ಗುಸ್ತಾವ್ ಲಿ ಕ್ಲೆಜಿವೊ,2008ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ತಮ್ಮ ಬಗಲಿಗೇರಿಸಿಕೊಂಡಿದ್ದಾರೆ.
ಕಾವ್ಯಾತ್ಮಕ ಮತ್ತು ಸಂವೇದನಾಶೀಲ ಭಾವಪರಾವಶತೆಯ ಬರವಣಿಗೆ ಶೈಲಿಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಲಿ ಕ್ಲೆಜಿಯೊ (68) ಅವರ ಕಾದಂಬರಿಗಳಲ್ಲಿ ನಾಗರಿಕ ಸಮುದಾಯದ ಮಾನವೀಯತೆಯ ಎಲ್ಲ ಮುಖಗಳನ್ನು ದಾಖಲಿಸಲಾಗಿದೆ. 1980ರಲ್ಲಿ ಡೆಸರ್ಟ್ ಕಾದಂಬರಿ ಮೂಲಕ ಕ್ಲೆಜಿಯೊ,ವಿಶ್ವ ಸಾಹಿತ್ಯ ಲೋಕದಲ್ಲಿ ಗಮನ ಸೆಳೆದರು.
ಟೆರ್ರಾ ಅಮಟಾ, ದ ಬುಕ್ ಆಫ್ ಫ್ಲೈಟ್ಸ್ ವಾರ್ ಮತ್ತು ದ ಗೇಂಟ್ಸ್ ಇತರ ಕೃತಿಗಳಾಗಿವೆ. ಕಳೆದ ವರ್ಷ ಪ್ರಶಸ್ತಿಯು ಬ್ರಿಟನ್ನಿನ ಡೋರಿಸ್ ಲೆಸ್ಸಿಂಗ್ ಪಾಲಾಗಿತ್ತು.
ಮಕ್ಕಳಿಗಾಗಿಯೂ ಇವರು ಅನೇಕ ಕತೆಗಳನ್ನು ಬರೆದದ್ದು,ಕಥಾಸಂಗ್ರಹಗಳು ಲಲ್ಲಾಬೈ ಮತ್ತು ಲಶಾಬಿಲೊವೋ ಹೆಸರಿನಲ್ಲಿ ಪ್ರಕಟಗೊಂಡಿದೆ. ಇತ್ತೀಚಿನ ಕೃತಿ ಬಲ್ಲಾಸಿನರ್ ಕ್ಲೆಜಿಯೊ ಕಲಾತ್ಮಕ ಚಿತ್ರಗಳ ಇತಿಹಾಸದ ಒಳನೋಟ ಬೀರುವುದಲ್ಲದೆ,ಅವರ ಬದುಕಿನಲ್ಲಿ ಚಲನಚಿತ್ರಗಳ ಮಹತ್ವದ ಬಗ್ಗೆಯೂ ಬೆಳಕು ಚೆಲ್ಲುತ್ತದೆ ಎಂದು ಸಾಹಿತ್ಯ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |