ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇಂಗ್ಲೆಂಡ್‌ನ "ಸ್ಥೂಲಕಾಯ-ವಿರೋಧಿ" ಆಂದೋಲನಕ್ಕೆ ಎನ್ಆರ್ಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಗ್ಲೆಂಡ್‌ನ "ಸ್ಥೂಲಕಾಯ-ವಿರೋಧಿ" ಆಂದೋಲನಕ್ಕೆ ಎನ್ಆರ್ಐ
ಸ್ಥೂಲ ಕಾಯ ನಿಯಂತ್ರಣ ಕುರಿತ ಬ್ರಿಟಿಷ್ ಪ್ರಚಾರಾಂದೋಲನಕ್ಕೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪೋಸ್ಟರ್ ಬಾಯ್ ಆಗಿ ನೇಮಕಗೊಂಡಿದ್ದಾರೆ. 210 ಕೆ.ಜಿ. ತೂಕವಿದ್ದ ಇವರು ಉದರ ಕುಗ್ಗಿಸುವ ಶಸ್ತ್ರಕ್ರಿಯೆಗಾಗಿ ಭಾರತಕ್ಕೆ ಬಂದಿದ್ದರು.

ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ವಿಭಾಗವು ಆರಂಭಿಸಿರುವ ಭರ್ಜರಿ ಪ್ರಚಾರಾಂದೋಲನವನ್ನು ಬೆಂಬಲಿಸಿ ಬೀದಿಗಿಳಿದ ಈ ಎನ್ಆರ್ಐ ಹೆಸರು ರಮಣ್ ಸೈನ್ (30). ಅತಿಯಾಗಿ ತಿನ್ನುವುದು, ಸಿಕ್ಕಿದ್ದನ್ನು ಕುಡಿಯುವುದು ಮತ್ತು ವ್ಯಾಯಾಮ ಮಾಡದಿರುವುದರಿಂದ ಏನೆಲ್ಲಾ ಪರಿಣಾಮಗಳಾಗುತ್ತವೆ ಎಂಬುದರ ಬಗ್ಗೆ ಮಕ್ಕಳಲ್ಲಿ ಜನಜಾಗೃತಿ ಮೂಡಿಸುವತ್ತ ಅವರು ಗಮನ ಕೇಂದ್ರೀಕರಿಸಿದ್ದಾರೆ.

ಭಾರತದಲ್ಲಿ ಶಸ್ತ್ರಕ್ರಿಯೆ ಮಾಡಿಸಿಕೊಂಡ ಬಳಿಕ ಅವರ ತೂಕವು 133 ಕೆ.ಜಿ.ಗೆ ಇಳಿದಿತ್ತು. "ಇಷ್ಟು ತೂಕ ಏರಿಸಿಕೊಳ್ಳಲು ನಾನೇ ಕಾರಣ. ಸಿಕ್ಕಿದ್ದನ್ನು ತಿಂದೆ ಮತ್ತು ಕುಡಿದೆ. ಯಾರು ಕೂಡ ಇಂಥದ್ದನ್ನು ತಿನ್ನು ಎಂದು ನನಗೆ ಬಲವಂತ ಮಾಡಿರಲಿಲ್ಲ. ಅನಾರೋಗ್ಯ ಕಾಡಿತಾದರೂ, ಶಸ್ತ್ರಕ್ರಿಯೆ ವಿಷಯ ಬಂದಾಗ, ಅಷ್ಟೊಂದು ಹಣ ಖರ್ಚು ಮಾಡಲು ಯಾರು ಕೂಡ ಮುಂದೆ ಬರಲಿಲ್ಲ" ಎಂದಿದ್ದಾರೆ ರಮಣ್.

ಸ್ಥೂಲಕಾಯರಾದಲ್ಲಿ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಹೇಳಬೇಕಿದೆ ಎಂದು "ಸ್ಥೂಲಕಾಯ ವಿರೋಧಿ" ಪ್ರಚಾರರಾಯಭಾರಿಯಾಗಲು ಹೊರಟಿರುವ ರಮಣ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಪರಮಾಣು ಕಾರ್ಯಕ್ರಮದ ಬಗ್ಗೆ ಸಂಧಾನವಿಲ್ಲ:ಜರ್ದಾರಿ
ಫ್ರಾನ್ಸ್‌‌ನ ಗುಸ್ತಾವ್‌‌ಗೆ ಸಾಹಿತ್ಯ ನೊಬೆಲ್
ನಿಹಿತಾಗೆ ತಾಳಿ ಕಟ್ಟಿದ ಬಿಕಿನಿ ಕಿಲ್ಲರ್ ಶೋಭರಾಜ್
ಶ್ರೀಲಂಕಾ:ಎಲ್‌‌ಟಿಟಿಇ ಹತ್ಯಾ ಸಂಚಿನಿಂದ ಸಚಿವರು ಪಾರು
ಪಾಕ್:ಅವಳಿ ಆತ್ಮಹತ್ಯಾ ಬಾಂಬ್ ದಾಳಿಗೆ 16 ಬಲಿ
ಅಣು ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ ಶುಕ್ರವಾರ