ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಾಲಿಬಾನ್ ನೆಲೆಯ ಮೇಲೆ ದಾಳಿ:20 ಉಗ್ರರು ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಲಿಬಾನ್ ನೆಲೆಯ ಮೇಲೆ ದಾಳಿ:20 ಉಗ್ರರು ಬಲಿ
ಪಾಕಿಸ್ತಾನದ ವಾಯುವ್ಯ ಗಡಿ ಪ್ರಾಂತ್ಯದಲ್ಲಿರುವ ಅಶಾಂತ ಸ್ವಾತ್ ಕಣಿವೆಯಲ್ಲಿರುವ ತಾಲಿಬಾನ್ ಉಗ್ರರ ನೆಲೆಯ ಮೇಲೆ ಪಾಕಿಸ್ತಾನ ಸೇನೆಯುಯುದ್ಧ ವಿಮಾನ ಮತ್ತು ಹೆಲಿಕಾಫ್ಟರ್ ಮೂಲಕ ದಾಳಿ ನಡೆಸಿದ ಪರಿಣಾಮವಾಗಿ ಸುಮಾರು 20 ಉಗ್ರರು ಸಾವನ್ನಪ್ಪಿದ್ದಾರೆ.

ತಾಲಿಬಾನ್‌ನ ಮತ್ತಾದಲ್ಲಿರುವ ಉಗ್ರರ ನೆಲೆಯನ್ನು ಧ್ವಂಸಗೊಳಿಸುವ ಗುರಿಯೊಂದಿಗೆ ಈ ಆಕ್ರಮಣವನ್ನು ನಡೆಸಲಾಗಿತ್ತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ತಾಲಿಬಾನ್ ಉಗ್ರರ ಮುಖ್ಯ ನೆಲೆಯೆಂದು ಕಂಡುಕೊಳ್ಳಲಾದ ಪಿಯೋಚಾರ್, ಶಾವರ್ ಮತ್ತು ಲಂಡಾಯ್ ಸರ್ ಪ್ರದೇಶದ ಮೇಲೆ ಯುದ್ಧ ವಿಮಾನವು ಬಾಂಬ್ ದಾಳಿ ನಡೆಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಯುದ್ಧ ವಿಮಾನದಿಂದ ಎಸೆಯಲ್ಪಟ್ಟ ಬಾಂಬ್‌ಗಳಿಂದಾಗಿ ಅನೇಕ ಮನೆಗಳು ಧ್ವಂಸವಾಗುವುದರೊಂದಿಗೆ, ಅನೇಕ ಸಾವುನೋವು ಸಂಭವಿಸಿದೆ ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.

ಸ್ವಾತ್‌ನ ಮತ್ತಾ ಪ್ರದೇಶದಲ್ಲಿ ಈಗಾಗಲೇ ಅನೇಕರು ತಮ್ಮ ಮನೆಗಳನ್ನು ತೊರೆದು ಹೋಗಿದ್ದು, ಕೆಲವೇ ಕುಟುಂಬಗಳು ವಾಸಿಸಿವೆ. ಇವರನ್ನು ಉಗ್ರಗಾಮಿಗಳ ಬೆಂಬಲಿಗರೆಂದು ಪಾಕ್ ಸೇನೆಯು ಪರಿಗಣಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂಗ್ಲೆಂಡ್‌ನ "ಸ್ಥೂಲಕಾಯ-ವಿರೋಧಿ" ಆಂದೋಲನಕ್ಕೆ ಎನ್ಆರ್ಐ
ಪಾಕ್ ಪರಮಾಣು ಕಾರ್ಯಕ್ರಮದ ಬಗ್ಗೆ ಸಂಧಾನವಿಲ್ಲ:ಜರ್ದಾರಿ
ಫ್ರಾನ್ಸ್‌‌ನ ಗುಸ್ತಾವ್‌‌ಗೆ ಸಾಹಿತ್ಯ ನೊಬೆಲ್
ನಿಹಿತಾಗೆ ತಾಳಿ ಕಟ್ಟಿದ ಬಿಕಿನಿ ಕಿಲ್ಲರ್ ಶೋಭರಾಜ್
ಶ್ರೀಲಂಕಾ:ಎಲ್‌‌ಟಿಟಿಇ ಹತ್ಯಾ ಸಂಚಿನಿಂದ ಸಚಿವರು ಪಾರು
ಪಾಕ್:ಅವಳಿ ಆತ್ಮಹತ್ಯಾ ಬಾಂಬ್ ದಾಳಿಗೆ 16 ಬಲಿ