ಕುಖ್ಯಾತ ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ನೇಪಾಳಿ ಮೂಲದ ತಮ್ಮ ಹದಿಹರೆಯದ ಪ್ರಿಯತಮೆ ನಿಹಿತಾ ಬಿಸ್ವಾಸ್ ಅವರನ್ನು ವಿಜಯದಶಮಿ ದಿನದಂದು ಮದುವೆಯಾ ಗಿದ್ದಾರೆ ಎಂದು ಭಾರತೀಯ ಮೂಲದ ಮಾಧ್ಯಮಗಳ ವರದಿ ವದಂತಿ ಎಂದು ಶುಕ್ರವಾರ ಇಲ್ಲಿನ ಕೇಂದ್ರ ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಮಾಧ್ಯಮಗಳಲ್ಲಿ ಮದುವೆಯ ಕುರಿತು ವರದಿಗಳು ಪ್ರಕಟಗೊಳ್ಳುವ ಮೊದಲು ತಮಗೆ ಈ ಮಾಹಿತಿ ಇರಲಿಲ್ಲ ಎಂದು ಕಾರಾಗೃಹದ ಭದ್ರತೆಯ ಜವಾಬ್ದಾರಿ ಹೊತ್ತಿರುವ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ಶೋಭರಾಜ್ ನಿಹಿತಾ ಬಿಸ್ವಾಸ್ ಅವರು ಭೇಟಿಯಾದದ್ದು ನಿಜ. ನಿಹಿತಾ ತಾಯಿ ಶೋಭರಾಜ್ ಪರ ವಕಾಲತ್ತು ವಹಿಸಿರುವ ಶಕುಂತಲಾ ಥಾಪಾ ಅವರು ಆಗ ಹಾಜರಿದ್ದರು. ಆದರೆ ಈ ಸಂದರ್ಭದಲ್ಲಿ ಉಂಗುರಗಳ ಜೊತೆಗೆ ಹಾರಗಳ ವಿನಿಮಯ ನಡೆಯಲಿಲ್ಲ.
ಕುಂಕುಮವನ್ನು ಹಚ್ಚಿಕೊಳ್ಳಲಿಲ್ಲ ಹೀಗಾಗಿ ದಸರಾ ಹಬ್ಬದ ದಿನ ಶೋಭರಾಜ್ ಮದುವೆ ನಡೆದಿದೆ ಎಂಬ ವರದಿ ಊಹಾಪೋಹದ್ದು ಎಂದು ಅಧಿಕಾರಿಗಳು ವಿವರಿಸಿದ್ದಾರೆ. |