ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಯ ಎನ್‌ಕೌಂಟರ್‌ಗೆ ಲಷ್ಕರ್ ಇ ತೊಯ್ಬಾದ ಟಾಪ್ ಕಮಾಂಡರ್ ಬಲಿಯಾಗಿರುವುದಾಗಿ ಅಧಿಕಾರಿಗಳ ಮೂಲಗಳು ತಿಳಿಸಿವೆ.
ಪುಲ್ವಾಮಾ ಜಿಲ್ಲೆಯ ಖಿಲ್ಲಾರ್ ಗ್ರಾಮದ ಸಮೀಪ ಅರೆಸೇನಾ ಪಡೆ, ಪೊಲೀಸ್ ದಳ ಹಾಗೂ ಲಷ್ಕರ್ ಕಮಾಂಡರ್ ಮೊಯಿನ್ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆತ ಸಾವನ್ನಪ್ಪಿರುವುದಾಗಿ ಮೂಲಗಳು ಹೇಳಿವೆ.
ಕಳೆದ ಕೆಲವು ಸಮಯಗಳಿಂದ ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಲಷ್ಕರ್ ಉಗ್ರಗಾಮಿ ಸಂಘಟನೆಯ ವರಿಷ್ಠನಾಗಿ ಕಾರ್ಯನಿರತನಾಗಿದ್ದು, ಆತ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಆಗಿದ್ದ ಎಂದು ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಭಯೋತ್ಪಾದನಾ ಕೃತ್ಯಗಳನ್ನು ಎಸಗಿದ್ದಲ್ಲದೆ, ಸಿಆರ್‌ಪಿಎಫ್‌ನ ಇಬ್ಬರನ್ನು ಹತ್ಯೆಗೈದ ಆರೋಪ ಸೇರಿದಂತೆ ಈತನ ಮೇಲೆ ಹಲವು ಆಪಾದನೆಗಳಿರುವುದಾಗಿ ವಿವರಿಸಿದ್ದಾರೆ. |