PTI ಭಾರತ ಅಮೆರಿಕ ನಾಗರಿಕ ಪರಮಾಣು ಸಹಕಾರಕ್ಕೆ ಸಂಬಂಧಿಸಿದ 123 ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಶುಕ್ರವಾರ ಸಹಿ ಹಾಕಿದ್ದು, ಈ ಮೂಲಕ ದ್ವಿಪಕ್ಷೀಯ ಪರಮಾಣು ಒಪ್ಪಂದವನ್ನು ಭಾರತ ಮತ್ತು ಅಮೆರಿಕ ಕಾರ್ಯರೂಪಕ್ಕಿಳಿಸಿದವು. ಇದೇ ಸಂದರ್ಭ, ಈ ಒಪ್ಪಂದಕ್ಕೆ ಉಭಯ ದೇಶಗಳಿಗೆ ಶಾಸನಾತ್ಮಕ ಬದ್ಧತೆ ಇದೆ ಎಂದು ಸ್ಪಷ್ಟಪಡಿಸಿರುವ ಭಾರತ, 123 ಒಪ್ಪಂದದನ್ವಯ ಸಮ್ಮತಿಸಿರುವ ಪಠ್ಯಕ್ಕೆ ಬದ್ಧವಾಗಿರುವುದಾಗಿ ತಿಳಿಸಿದೆ. ಇದರೊಂದಿಗೆ 34 ವರ್ಷಗಳಿಂದ ಭಾರತವು ಅನುಭವಿಸುತ್ತಿದ್ದ ಪರಮಾಣು ಅಸ್ಪೃಶ್ಯತೆ ಕಳಚಿಬಿದ್ದಂತಾಗಿದೆ.ವಿದೇಶಾಂಗ