ಭಾರತ ಅಮೆರಿಕ ಅಣು ಒಪ್ಪಂದದ ಮಾದರಿಯಲ್ಲಿಯೇ ಅಣು ಒಪ್ಪಂದ ನಡೆಸಲು ಪಾಕಿಸ್ತಾನ ಬಯಸುತ್ತದೆ ಎಂಬ ಪಾಕಿಸ್ತಾನದ ಪುನರುಚ್ಛರಣೆಯ ನಡುವೆಯೂ, ಚೀನಾದೊಂದಿಗೆ ಪಾಕಿಸ್ತಾನವು ಈಗಾಗಲೇ ಪರಮಾಣು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ ಹೊಂದಿರುವುದರಿಂದ ಚೀನಾದೊಂದಿಗೆ ಪರಮಾಣು ಒಪ್ಪಂದವನ್ನು ನಡೆಸುವುದಿಲ್ಲ ಎಂದು ಪಾಕಿಸ್ತಾನ ತಿಳಿಸಿದೆ.ಚಾಸ್ಮಾ ಪರಮಾಣು ಇಂಧನ ಯೋಜನೆ ಮುಂತಾದ ಯೋಜನೆಗಳ ಮೂಲಕ ಪಾಕಿಸ್ತಾನ ಮತ್ತು ಚೀನಾವು ಈಗಾಗಲೇ ಪರಸ್ಪರ ಪರಮಾಣು ಸಹಕಾರವನ್ನು ಹೊಂದಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ಮಹಮ್ಮದ್ ಸಾಧಿಕ್ ತಿಳಿಸಿದ್ದಾರೆ.ಚೀನಾದೊಂದಿಗೆ ಇನ್ನೊಂದು ಪರಮಾಣು ಒಪ್ಪಂದವನ್ನು ನಡೆಸುವ ಅಗತ್ಯವಿಲ್ಲ ಎಂಬುದಾಗಿ ಸಾಧಿಕ್ ಹೇಳಿದ್ದು, ಹೂ ಜಿಂಟಾವೋ ಆಮಂತ್ರಣದ ಮೇರೆಗೆ ನಾಲ್ಕು ದಿನಗಳ ಭೇಟಿಗಾಗಿ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಚೀನಾ ಭೇಟಿಯ ಮುಂದಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಅಮುಮೋದನೆ ನೀಡಿದ ಬೆನ್ನಲ್ಲೇ, ಇದೇ ರೀತಿಯ ಒಪ್ಪಂದವನ್ನು ಪಾಕಿಸ್ತಾನವು ಚೀನಾದೊಂದಿಗೆ ನಡೆಸಲಿದೆ ಎಂಬುದಾಗಿ ಪಾಕಿಸ್ತಾನವು ಈ ಮೊದಲು ಘೋಷಿಸಿತ್ತು. |
|