ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೊಮಾಲಿಯಾ: ಕಾಸರಗೋಡಿನ ಯುವಕ ಸಹಿತ ಭಾರತೀಯರ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೊಮಾಲಿಯಾ: ಕಾಸರಗೋಡಿನ ಯುವಕ ಸಹಿತ ಭಾರತೀಯರ ಬಿಡುಗಡೆ
ಸೊಮಾಲಿಯಾದಲ್ಲಿ ಒಂದೂವರೆ ತಿಂಗಳ ಹಿಂದೆ ಅಪಹರಣಕ್ಕೀಡಾಗಿರುವ ಹಡಗಿನಲ್ಲಿದ್ದ ಕಾಸರಗೋಡಿನ ಯುವಕನೂ ಸೇರಿದಂತೆ ಮೂವರು ಭಾರತೀಯರನ್ನು ಹಾಗೂ ಇತರ 26 ಮಂದಿಯನ್ನು ಹಡಗುಗಳ್ಳರು ಬಿಡುಗಡೆ ಮಾಡಿದ್ದಾರೆ.

ಅಪಹೃತ ಹಡಗನ್ನು ಹಡಗುಗಳ್ಳರು ಬಿಡುಗಡೆ ಮಾಡಿದ್ದು, ಅದರೊಳಗಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಶಿಪ್ಪಿಂಗ್ ವಿಭಾಗದ ಮಹಾ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಸರಗೋಡಿನ ಜೀವ ಕಿರಣ್ ಡಿಸೋಜ, ಮಹಾರಾಷ್ಟ್ರದ ರತ್ನಗಿರಿಯ ಅಕ್ಬರ್ ಅಲಿ ರಫೀಕ್ ಜುವಾಲೆ ಮತ್ತು ಗೋವಾದ ಅಂತೋನಿ ಕ್ಲೈವ್ ತೆಮುಡೋ ಅವರು ಬಂಧಮುಕ್ತರಾದ ಭಾರತೀಯ ಸಿಬ್ಬಂದಿಗಳು.

ಚೀನಾದಿಂದ 40 ಸಾವಿರ ಟನ್ ಕಬ್ಬಿಣದ ಅದಿರು ಹೊತ್ತಿದ್ದ ಎಂವಿ ಇರಾನ್ ಡೆಯನಾತ್ ಎಂಬ ಹಡಗು ನೆದರ್ಲೆಂಡ್‌ನತ್ತ ತೆರಳುತ್ತಿದ್ದಾಗ ಕಳೆದ ಆಗಸ್ಟ್ 22ರಂದು ಕೆಂಪು ಸಮುದ್ರದಲ್ಲಿ ಸೊಮಾಲಿಯಾ ಹಡಗುಗಳ್ಳರಿಂದ ಅಪಹರಣಕ್ಕೀಡಾಗಿತ್ತು. ಹಡಗಿನಲ್ಲಿ ಭಾರತೀಯರಲ್ಲದೆ ಇರಾನ್ ಮತ್ತು ಕ್ರೊಯೇಷಿಯಾ ನಾಗರಿಕರೂ ಇದ್ದರು. ಶಸ್ತ್ರಾಸ್ತ್ರ ಹೊಂದಿದ್ದ ಹಡಗುಗಳ್ಳರು ಸ್ಪೀಡ್‌ಬೋಟ್‌ಗಳಲ್ಲಿ ಬಂದು ಹಡಗನ್ನು ಆಕ್ರಮಿಸಿ ಅದನ್ನು ವಶಕ್ಕೆ ತೆಗೆದುಕೊಂಡಿದ್ದರು.

ಅವರು ಭಾರೀ ಪ್ರಮಾಣದ ಒತ್ತೆಹಣದ ಬೇಡಿಕೆ ಮುಂದಿಟ್ಟಿದ್ದು, ಒತ್ತೆ ಹಣ ನೀಡಲಾಗಿದೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೀನಾದೊಂದಿಗೆ ಅಣುಒಪ್ಪಂದವಿಲ್ಲ:ಪಾಕ್
ಅಣುಬಂಧಕ್ಕೆ ಪ್ರಣಬ್-ರೈಸ್ ಅಂತಿಮ ಅಂಕಿತ
ಶ್ರೀನಗರ:ಎನ್‌ಕೌಂಟರ್‌ಗೆ ಲಷ್ಕರ್ ಕಮಾಂಡರ್ ಬಲಿ
ಶೋಭರಾಜ್-ನಿಹಿತಾ ಮದುವೆ ನಡೆದಿಲ್ಲ: ನೇಪಾಳ
ಫಿನ್‌‌ಲ್ಯಾಂಡ್ ಮಾಜಿ ಅಧ್ಯಕ್ಷ ಮಾರ್ತಿಗೆ ಶಾಂತಿ ನೊಬೆಲ್
ತಾಲಿಬಾನ್ ನೆಲೆಯ ಮೇಲೆ ದಾಳಿ:20 ಉಗ್ರರು ಬಲಿ